ಕಬ್ಬಾಳಮ್ಮನ ದರ್ಶನ ಪಡೆದ ಡಿಕೆಶಿ ಕುಟುಂಬ ರಾಮನಗರ
ರಾಮನಗರ –
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತರಾಗಿ ದೇವಾನು ದೇವತೆಗಳಿಗೆ ಪೂಜೆ ಸಲ್ಲಿಸಿದರು.ಮೊದಲು ತಮ್ಮ ಕುಲದೇವರ ದೇವಸ್ಥಾನಕ್ಕೆ ತೆರಳಿ ನಂತರ ರಾಮನಗರದ ಕಬ್ಬಾಳಮ್ಮನ ದರ್ಶನ ಪಡೆದರು. ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೇ ಆಗಮಿಸಿದ ಡಿಕೆಶಿ ಕಬ್ಬಾಳಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು.
ದೀಪಾವಾಳಿ ಹಿನ್ನಲೆಯಲ್ಲಿ ಮೊದಲು ತಮ್ಮ ಮನೆದೇವರಾದ ಕನಕಪುರದ ಕೆಂಕೆರಮ್ಮನ ದೇವಸ್ಥಾನಕ್ಕೇ ತೆರಳಿ ಒಂದು ಘಂಟೆಗೂ ಹೆಚ್ಚು ಕಾಲ ದೇವಸ್ಥಾನದಲ್ಲಿ ಕಂಕೆರಮ್ಮನಿಗೆ ಮೊದಲು ಪೂಜೆ ಸಲ್ಲಿಸಿ ಆಶಿರ್ವಾದ ಪಡೆದು ಆ ನಂತರ ನೇರವಾಗಿ ಕಬ್ಬಾಳಮ್ಮನ ದೇವಸ್ಥಾನಕ್ಕೆ ತೆರಳಿದರು.
ಸಾತನೂರು ಸಮೀಪದ ಕಬ್ಬಾಳು ಗ್ರಾಮದಲ್ಲಿನ ಕುಲ ದೇವತೆ ಕಬ್ಬಾಳಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು.ಪತ್ನಿ ಮತ್ತು ಮಕ್ಕಳೊಂದಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಒಂದು ಘಂಟೆಗಳ ಕಾಲ ಕಬ್ಬಾಳಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಕಬ್ಬಾಳಮ್ಮನ ಆಶಿರ್ವಾದವನ್ನು ಪಡೆದುಕೊಂಡರು. ಪತ್ನಿ ಮಕ್ಕಳು ಸೇರಿದಂತೆ ಕುಟುಂಬಸ್ಥರಿದ್ದರು.