ಮಂಡ್ಯ –
ಸದ್ದಿಲ್ಲದೇ ಮತ್ತೆ ಹಳ್ಳಿ ಹಳ್ಳಿಗೂ ಮಹಾಮಾರಿ ಹಬ್ಬುತ್ತಿದೆ ಎಂಬ ಅನುಮಾನ ಕಂಡು ಬರುತ್ತಿದೆ.ಹೌದು ಮಂಡ್ಯ ಜಿಲ್ಲೆಯ ಹಳ್ಳಿಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕರೊನಾ ಸ್ಫೋಟವಾಗಿದೆ.ಪ್ರೈಮರಿ ಸ್ಕೂಲ್ ನ ಐದು ಮಕ್ಕಳಿಗೆ ಪಾಸಿಟಿವ್ ಕಂಡು ಬಂದಿದೆ.ಸಾಮೂಹಿಕ ಪರೀಕ್ಷೆ ವೇಳೆ ಐದು ಮಕ್ಕಳಲ್ಲಿ ಸೋಂಕು ದೃಢವಾಗಿದ್ದು ಕಂಡು ಬಂದಿದೆ.
ಮಕ್ಕಳಲ್ಲಿ ಸೋಂಕು ದೃಡಪಟ್ಟ ಬಳಿಕ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ. ಸೋಂಕಿತ ಮಕ್ಕಳಿಗೆ ಸಣ್ಣ ಪುಟ್ಟ ಲಕ್ಷಣಗಳು ಕಂಡು ಬಂದಿವೆ.50 ಮಕ್ಕಳಲ್ಲಿ ಐದು ಮಕ್ಕಳಿಗೆ ಪಾಸಿಟಿವ್,ಉಳಿದ ಮಕ್ಕಳಿಗೆ ನೆಗೆಟಿವ್ ರಿಪೋರ್ಟ್ ನಲ್ಲಿ ಕಂಡು ಬಂದಿದೆ.ಮಕ್ಕಳಲ್ಲಿ ಕರೊನಾ ದೃಢಪಟ್ಟ ಬಳಿಕ ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿಯನ್ನು ನೀಡಿ ಪರಿಶೀಲನೆ ಮಾಡಿದ್ದಾರೆ.
ಗ್ರಾಮಸ್ಥರಿಗೆ ಧೈರ್ಯ ತುಂಬಿ ಮುನ್ನೆಚ್ಚರಿಕೆ ವಹಿಸಲು ಸಲಹೆಯನ್ನು ನೀಡಿದ್ದಾರೆ.ಸಧ್ಯ ಸೋಂಕಿತ ಮಕ್ಕಳನ್ನ ಮನೆಗಳಲ್ಲೇ ಐಸೋಲೇಷನ್ ಮಾಡಿದ್ದಾರೆ ಅಧಿಕಾರಿ ಗಳು.ಸೋಂಕಿತ ಮಕ್ಕಳ ಕುಟುಂಬದವರಿಗೂ ಕರೊನ ಟೆಸ್ಟ್ ಮಾಡಲಾಗಿದ್ದು ಇಂದು ಸಂಜೆ ಅಥವಾ ನಾಳೆ ರಿಪೋರ್ಟ್ ಬರುವ ಸಾಧ್ಯತೆ ಇದೆ.