ರಾಯಚೂರು –
ಸಾಮಾನ್ಯವಾಗಿ ಶಾಲೆಗೆ ಹೋಗಿ ಪಾಠ ಮಾಡಿ ನೂರೆಂಟು ಕೆಲಸ ಕಾರ್ಯಗಳನ್ನು ಮಾಡಿ ಬರೊದು ದೊಡ್ಡ ಕೆಲಸ ಇದರ ನಡುವೆ ಇಲ್ಲೊಬ್ಬ ಶಿಕ್ಷಕರು ಶಾಲೆಯ ಶೈಕ್ಷಣಿಕ ಚಟುವಟಿಕೆ ಗಳ ನಡುವೆ ಶಾಲೆಯನ್ನು ಮಾದರಿ ಶಾಲೆ ಯನ್ನಾಗಿ ಮಾಡಿದ್ದಾರೆ.
ಹೌದು ಸಿಂಧನೂರು ತಾಲ್ಲೂಕಿನ ಗೊಣ್ಣಿಗನೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೊಟ್ರೇಶ್ ಹಿರೇಮಠ ಅವರು ಸಮುದಾಯದ ನೆರವಿನೊಂದಿಗೆ ಶಾಲೆಯನ್ನು ಮಾದರಿ ರೂಪದಲ್ಲಿ ಅಭಿವೃದ್ಧಿ ಮಾಡಿದ್ದಾರೆ.
ಶಾಲೆಗೆ ಹೊಸ ಸ್ವರೂಪ ನೀಡುವುದರ ಜೊತೆಗೆ ಗ್ರಾಮ ವನ್ನು ಹೊಗೆಮುಕ್ತ ಬಯಲು ಶೌಚ ಮುಕ್ತ,ಸಸ್ಯ ಶ್ಯಾಮಲೆ ಗ್ರಾಮ,ಕತ್ತಲುಮುಕ್ತ ಗ್ರಾಮ ಹಾಗೂ ವಿಕಾಸ ಗ್ರಾಮವಾಗಿ ಪರಿವರ್ತಿಸಿದ್ದಾರೆ.ದಾನಿಗಳಿಂದ ಮತ್ತು ಸರ್ಕಾರಿ ಯೋಜನೆ ನೆರವು ತಲುಪುವಂತೆ ಮಾಡಿದ್ದಾರೆ.
ಆರಂಭದಲ್ಲಿ 30 ಮಕ್ಕಳ ದಾಖಲಾತಿ ಇದ್ದ ಶಾಲೆಯನ್ನು 200ಕ್ಕೂ ಹೆಚ್ಚು ಮಕ್ಕಳು ದಾಖಲಾಗುವ ಮಟ್ಟಕ್ಕೆ ಅಭಿ ವೃದ್ಧಿ ಪಡಿಸಿದ್ದಾರೆ.ಗೊಣ್ಣಿಗನೂರು ಶಾಲೆಗೆ ಸುತ್ತಲಿನ 8 ಗ್ರಾಮಗಳಿಂದ ಮಕ್ಕಳು ಖಾಸಗಿ ವಾಹನಗಳಲ್ಲಿ ಶಾಲೆಗೆ ವಿದ್ಯಾಭ್ಯಾಸಕ್ಕೆ ಬರುತ್ತಿದ್ದಾರೆ.
ಶಾಲೆ ಆವರಣದಲ್ಲಿ 300ಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ಪರಿಸರ ಮಿತ್ರ ಶಾಲೆ ಮಾಡಿದ್ದಾರೆ.ಸಾಲದಂತೆ ಗುಣಮ ಟ್ಟದ ಶಿಕ್ಷಣ ನೀಡಿದ್ದರ ಫಲವಾಗಿ ಈವರೆಗೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾಗಿ ದ್ದಾರೆ.ಗೊಣ್ಣಿಗನೂರಿನಲ್ಲಿ 17 ವರ್ಷಗಳ ಸೇವೆಯ ಬಳಿಕ ಒಂದು ವರ್ಷದ ಹಿಂದೆ ಕೊಟ್ರೋಶ್ ಅವರಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.ಸದ್ಯ ಸಿಂಧನೂರು ತಾಲ್ಲೂಕಿನ ಒಳಬಳ್ಳಾರಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾಗಿದ್ದಾರೆ.ಏನೇ ಆಗಲಿ ಇವರ ಕಾರ್ಯ ನಿಜವಾಗಿಯೂ ಮೆಚ್ಚುವಂತಾಗಿದೆ ಇತರ ಶಿಕ್ಷಕರಿಗೆ ಮಾದರಿಯಾಗಿದೆ