ಬೆಂಗಳೂರು –
ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘ(ರಿ) ಬೆಂಗಳೂರು ಈ ಒಂದು ಸಂಘದ ಮಾನ್ಯತೆ ಯನ್ನು ರಾಜ್ಯ ಸರ್ಕಾರ ಹಿಂದೆ ಪಡೆದುಕೊಂಡಿದೆ.ಹೌದು ಸರ್ಕಾರದ ಷರತ್ತು ಗಳನ್ನು ಸರಿಯಾಗಿ ಸಂಘವು ಪಾಲಿಸ ದ ಹಿನ್ನೆಲೆಯಲ್ಲಿ ಹಾಗೇ ಸಂಘ ದಲ್ಲಿನ ಕೆಲವೊಂದಿಷ್ಟು ಸಮಸ್ಯೆ ಗಳ ಕುರಿತು ಮನವಿಯನ್ನು ಮಾಡಲಾಗಿತ್ತು ಕೊಪ್ಪಳದ ಶಿಕ್ಷಕಿ ಶ್ರೀಮತಿ ಅನ್ನಪೂರ್ಣ ಹಸ್ಕಿ ಅವರು ಈ ಒಂದು ಕುರಿತು ಧ್ವನಿ ಎತ್ತಿದ್ದರು ಹೀಗಾಗಿ ಸಂಘದ ಮಾನ್ಯತೆಯನ್ನು ರಾಜ್ಯ ಸರ್ಕಾರ ಹಿಂದೆ ತಗೆದುಕೊಂಡಿದೆ
ಹೌದು 2018 ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘಕ್ಕೆ ಮಾನ್ಯತೆಯನ್ನು ರಾಜ್ಯ ಸರ್ಕಾರ ನೀಡಿತ್ರು.ಸಂಘವು ಆರಂಭಗೊಂಡು ಈವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಚುನಾವಣೆ ನಡೆಯದ ಕಾರಣ ಈ ಒಂದು ಕುರಿತು ಮನವಿ ಮಾಡಿಕೊಂಡರು ಎರಡು ವರ್ಷಗಳಾ ದರು ಸ್ಪಂದಿಸಿದ ಹಿನ್ನೆಲೆಯಲ್ಲಿ ಈ ಒಂದು ಸಣ್ಣ ಸಮಸ್ಯೆ ಯನ್ನು ಸಮಸ್ಯೆ ಯನ್ನಾಗಿ ಮಾಡಿದ್ದು ಹಾಗೇ ನೊಂದಣಿ ಇಲಾಖೆ ಮತ್ತು ಶಿಕ್ಷಣ ಇಲಾಖೆಯಲ್ಲಿ ಅನೇಕ ದೂರುಗಳು ಮತ್ತು ಸರ್ಕಾರದ ಷರತ್ತು ಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಇದೆಲ್ಲ ವಿಚಾರ ಕುರಿತು ಶಿಕ್ಷಕಿ ಅನ್ನಪೂರ್ಣ ಅಸ್ಕಿ ಧ್ವನಿ ಎತ್ತಿ ಈಗ ಗೆಲುವು ಸಾಧಿಸಿದ್ದಾರೆ.
ಇನ್ನೂ 2018 ರಲ್ಲಿ ನಗರ ಪ್ರದೇಶ ಗಳಲ್ಲಿ ಕರ್ತವ್ಯ ನಿರ್ವಹಿ ಸುವ ಶಿಕ್ಷಕರು ವರ್ಗಾವಣೆಯನ್ನು ತಪ್ಪಿಸಿಕೊಂಡು ಇದ್ದ ಸ್ಥಳದಲ್ಲಿಯೇ ಇರಲು ಮಾನ್ಯತೆ ಪಡೆದ ಸಂಘಕ್ಕೆ ವರ್ಗಾ ವಣೆ ಇಂದ ವಿನಾಯಿತಿ ಇದ್ದ ಕಾರಣ ಅನೇಕರು ಪದಾಧಿ ಕಾರಿಗಳಾಗಿ ವರ್ಗಾವಣೆಯಿಂದ ಮುಕ್ತಿ ಹೊಂದಿದ್ದಾರೆ ಅಂತಹವರ ಬಗ್ಗೆ ಇಲಾಖೆ ಸೂಕ್ತ ವಿಚಾರಣೆ ಕೈಗೊಂಡು ಕಾನೂನು ಕ್ರಮ ಜರುಗಿಸಲು ಆಗ್ರಹಿಸಲಾಗಿದ್ದು ಈ ಒಂದು ಕುರಿತು ಧ್ವನಿ ಎತ್ತುವುದಾಗಿ ಶಿಕ್ಷಕಿ ಅನ್ನಪೂರ್ಣ ಅಸ್ಕಿ ಸುದ್ದಿ ಸಂತೆ ಗೆ ಹೇಳಿದ್ದಾರೆ.
ಇನ್ನೂ ಅನ್ನಪೂರ್ಣ ಅಸ್ಕಿ ದೈಹಿಕ ಶಿಕ್ಷಣ ಶಿಕ್ಷಕಿ ಆಗಿದ್ದಾರೆ ಸ ಪ ಪೂ ಕಾಲೇಜ್ ಪ್ರೌಡ ವಿಭಾಗ ಕೊಪ್ಪಳ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ವಿವಿಧ ಜಿಲ್ಲೆಗಳಿಂದ ಶಿಕ್ಷಕರಿಂದ ಹಣ ಸಂದಾಯ ವಾಗಿದ್ದು 7,45000 Rs Bank ಖಾತೆಯಲ್ಲಿ 3,36000 Rs ಇದ್ದು ಉಳಿದ ಹಣದ ಲೆಕ್ಕಾಚಾರವಿಲ್ಲ. ಇಂತಹ ಅನೇಕ ಸಮಸ್ಯೆ ಗಳ ಬಗ್ಗೆ ರಾಜ್ಯ ಸಂಘದ ಪದಾಧಿಕಾರಿಗಳ ಜೊತೆ ಚರ್ಚಿಸಿದರೆ ಗ್ರೂಪ್ ನಿಂದ ರಿಮೂವ್ ಮಾಡುವದನ್ನು ಮಾಡುತ್ತಿದ್ದರು.ಅನೇಕ ಕಡೆಗ ಳಲ್ಲಿ ಬ್ಯಾಂಕ್ ಖಾತೆಯೆ ಆಗಿರುವುದಿಲ್ಲ.ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ತಾಲೂಕು ಸಂಘ ಜಿಲ್ಲಾ ಸಂಘದ ಖಾತೆ ಈವರೆಗೆ ಆಗಿರುವುದಿಲ್ಲ ಇದೆಲ್ಲವನ್ನೂ ಪ್ರಶ್ನೆ ಮಾಡಿ ಈಗ ಗೆಲುವು ಸಾಧಿಸಿದ್ದಾರೆ.