ಬೆಂಗಳೂರು –
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ದಲ್ಲಿ ಶಾಲೆಗಳನ್ನು ಬಂದ್ ಮಾಡುವ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ.ಹೌದು ರಾಜ್ಯಾವ್ಯಾಪಿ ಶಾಲೆಗಳನ್ನು ಮುಚ್ಚುವ ಪ್ರಸ್ತಾಪ ಇಲ್ಲ ಎಂದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಶಾಲೆಗಳಿಂದ ಸೋಂಕು ಹರಡುತ್ತದೆ ಎಂದು ಎಲ್ಲೂ ಸಾಬೀತಾಗಿಲ್ಲ. ಹೀಗಾಗಿ ರಾಜ್ಯವ್ಯಾಪಿ ಶಾಲೆಗಳನ್ನು ಮುಚ್ಚುವ ಪ್ರಸ್ತಾಪ ಇಲ್ಲ ಬೆಂಗಳೂರು ನಗರದಲ್ಲಿ ಮಾತ್ರ ಕೋವಿಡ್ ಸೋಂಕು ಹೆಚ್ಚಿದೆ ಹೀಗಾಗಿ ಇಲ್ಲಿ ಮಾತ್ರ ಶಾಲೆ ಬಂದ್ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಶಾಲೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡರೆ ಆ ಶಾಲೆಯನ್ನು ತಾತ್ಕಾಲಿಕವಾಗಿ ನಾಲ್ಕು ದಿನ ಮುಚ್ಚಬಹು ದು. ಆದರೆ ಇಡಿ ರಾಜ್ಯದಲ್ಲಿ ಶಾಲಾ ತರಗತಿ ಬಂದ್ ಮಾಡುವ ಪರಿಸ್ಥಿತಿ ಸದ್ಯಕ್ಕೆ ಇಲ್ಲ ಎಂದರು. ಇದರೊಂದಿಗೆ ಸಧ್ಯವಂತೂ ಶಾಲೆಗಳು ಬಂದ್ ಆಗುತ್ತವೆನಾ ಎಂಬ ಆತಂಕದಲ್ಲಿದ್ದ ಪೋಷಕರಿಗೆ ನೆಮ್ಮದಿಯನ್ನು ನೀಡಿದ್ದಾರೆ.
 
			

 
		 
			



















