ಮುದ್ದೇಬಿಹಾಳ –
ಕರ್ತವ್ಯಕ್ಕೆ ಹಾಜರಾದ ಬೆನ್ನಲ್ಲೇ ಮುದ್ದೇಬಿಹಾಳ ಬಿಇಓ ಹನುಮಂತಗೌಡ ಮಿರ್ಜಿ ಸಮಾಜ ಮೆಚ್ಚುವ ಕೆಲಸವನ್ನು ಮಾಡಿದ್ದಾರೆ.ಹೌದು ಶಾಲೆಗೆ ಗೈರು ಹಾಜರಾದ ಮತ್ತು ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಮರಳಿ ಕಳಿಸುವ ಮೂಲಕ ಅವರನ್ನು ಕಲಿಕಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ.ಹಾಗೇ ಶಿಕ್ಷಣದ ಮಹತ್ವ ವ್ಯರ್ಥ ವಾಗದಂತೆ ನೋಡಿಕೊಳ್ಳಬೇಕು ಎಂದು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಗೌಡ ಮಿರ್ಜಿ ಅವರು ಪೋಷಕರಿಗೆ ಸಲಹೆ ಯನ್ನು ನೀಡಿದರು.ತಂಗಡಗಿ ಬಳಿ ಇರುವ ಕೃಷ್ಣಾ ನದಿ ಸೇತುವೆ ಹತ್ತಿರದಿಂದ ಅಮರಗೋಳಕ್ಕೆ ಹೋಗುವ ರಸ್ತೆ ಮಧ್ಯೆ ತಾಯಿಯೊಂದಿಗೆ ಬಟ್ಟೆ ತೊಳೆಯಲು ನದಿಗೆ ಬಂದಿದ್ದ ಮಕ್ಕಳನ್ನು ಮಾತನಾಡಿಸಿದ ಅವರು ಶಾಲೆ ಬಿಡಿಸಿ ಮಕ್ಕಳನ್ನು ಕೆಲಸಕ್ಕೆ ಕರೆ ತರದಂತೆ,ಅದರಲ್ಲೂ ಅಪಾಯ ಕಾರಿ ಸ್ಥಳವಾಗಿರುವ ನದಿಗೆ ಮಕ್ಕಳನ್ನು ಕರೆ ತರಲೇಬಾರ ದಂತೆ ಆ ಮಕ್ಕಳ ತಾಯಿಗೆ ತಿಳಿವಳಿಕೆ ನೀಡಿ ಈ ಕೂಡಲೇ ಮಕ್ಕಳನ್ನು ಶಾಲೆಗೆ ಬರುವಂತೆ ತಿಳಿಸಿದರು.
ಇದಕ್ಕೂ ಮುನ್ನ ಆ ಮಕ್ಕಳು ತಾವು ನಿತ್ಯ ಶಾಲೆಗೆ ಹೋಗು ತ್ತಿದ್ದು ಇವತ್ತೊಂದು ದಿನ ಬಿಟ್ಟಿದ್ದೇವೆ.ಇನ್ನು ಮುಂದೆ ನಿತ್ಯವೂ ಶಾಲೆಗೆ ಹೋಗುತ್ತವೆಂದರು ತಂಗಡಗಿ ವಲಯದ ಸಿಆರ್‌ಪಿ ಎಂ.ಎ.ತಳ್ಳಿಕೇರಿ ಸೇರಿದಂತೆ ಹಲವರು ಈ ಒಂದು ಸಮಯದಲ್ಲಿ ಉಪಸ್ಥಿತರಿದ್ದರು