ಬೆಂಗಳೂರು –
ಮೇಕೆದಾಟು ಪಾದಯಾತ್ರೆಯಲ್ಲಿ ಮಕ್ಕಳನ್ನ ಬಳಕೆ ಮಾಡ್ತಿರೋ ವಿಚಾರವಾಗಿ ಶಾಲಾ ಮಕ್ಕಳೊಂದಿಗೆ ಪೊಟೊ ತಗೆಯಿಸಿರುವ ಶಾಲಾ ಶಿಕ್ಷಕರ ಅದರಲ್ಲೂ ಮುಖ್ಯೋಪಾ ಧ್ಯಾಯರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ಬಿಇಓ,ಡಿಡಿಪಿಐಗೆ ತಕ್ಷಣವೇ ಹೋಗಿ ರಿಪೋರ್ಟ್ ಕೊಡಿ ಅಂತಾ ಹೇಳಿದ್ದೀವಿ.
ಇವತ್ತು ಅವ್ರು ಕೊಟ್ಟ ನಂತರ ಎಲ್ಲಾ ಮಕ್ಕಳಿಗೂ ಕೊರೊನಾ ಟೆಸ್ಟಿಂಗ್ ಮಾಡಲಾಗುತ್ತೆ.ಅದು ಡಿಕೆ ಶಿವಕುಮಾರ್ ಅವರ ಅಂಡರ್ ನಲ್ಲಿ ಬರೋ ಎಡೆಡ್ ಶಾಲೆ,ಅಲ್ಲಿನ ಮುಖ್ಯೋಪಾಧ್ಯಾಯರು ಮಾಡಿರುವ ತಪ್ಪಾಗಿದೆ.ವಿದ್ಯಾರ್ಥಿಗಳನ್ನ ರಾಜಕೀಯವಾಗಿ ಬಳಸಿ ಕೊಳ್ಳಬಾರದು ಅಂತಾ ಇದೆ.ಆ ತರ ಮಾಡಿದ್ದು ತಪ್ಪು. ಏನಾಗಿದೆ ಅನ್ನೋದನ್ನ ನೋಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಎಂದರು.