ಬೆಂಗಳೂರು –
ಶಿಕ್ಷಣ ಸಚಿವ ಬಿ ಸಿ ನಾಗೇಶ್ ಇಲಾಖೆಯ ಅಧಿಕಾರಿಗಳು ಮತ್ತು ರಾಜ್ಯದ ಜಿಲ್ಲಾಧಿಕಾರಿ ಗಳೊಂದಿಗೆ ಸಭೆ ಮಾಡಿ ದರು.ಹೌದು ಸಧ್ಯ ರಾಜ್ಯದಲ್ಲಿ ಕರೋನ ಹೆಚ್ಚಾಗುತ್ತಿದೆ ಹೀಗಾಗಿ ರಾಜ್ಯದ ಶಾಲಾ ಕಾಲೇಜುಗಳಲ್ಲಿನ ಕರೋನ ಪರಿಸ್ಥಿತಿ ಕುರಿತು ಮಾಹಿತಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಈ ಒಂದು ಸಭೆಯನ್ನು ಮಾಡಿದರು
ರಾಜ್ಯದ ಶಾಲೆಗಳು,ಪಿಯು ಕಾಲೇಜುಗಳು,ವಸತಿ ಶಾಲೆಗ ಳಲ್ಲಿ ವರದಿಯಾಗಿರುವ ಕೋವಿಡ್-19 ಪ್ರಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು.ಇನ್ನೂ ಇದೇ ವೇಳೆ ಮುಂಜಾ ಗ್ರತಾ ಕ್ರಮ ಹಾಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಯಿತು