ಬೆಂಗಳೂರು –
ಜನಪರ ಆಡಳಿತಕ್ಕೆ ಸುಧಾರಣಾ ಕ್ರಮಗಳು ಎಷ್ಟು ಅವಶ್ಯಕವೋ ಆಡಳಿತದಲ್ಲಿ ಆಮೂಲಾಗ್ರ ಬದಲಾವಣೆ ತರುವುದಕ್ಕೆ ನೌಕರರ ಕಾರ್ಯಕ್ಷಮತೆಯೂ ಅಷ್ಟೇ ಅವಶ್ಯ ಈ ಒಂದು ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿರುವ ಶಿಕ್ಷಣ ಇಲಾಖೆ ಅನುಕಂಪದ ಆಧಾರದ ಮೇಲೆ ನೇಮಕಗೊಂಡಿ ರುವ ಹಾಗೂ ನಿಕೃಷ್ಟ ಕಾರ್ಯನಿರ್ವಹಣೆಯ ‘ಸಿ’ ದರ್ಜೆ ಯ ನೌಕರರಿಗೆ 100 ಅಂಕಗಳ ಪರೀಕ್ಷೆಗೆ ಸಿದ್ಧತೆ ನಡೆಸಿದೆ ಕಾಯಂ ಪೂರ್ವ ಸೇವಾವಧಿ ಘೋಷಣೆಗೆ ಮುನ್ನ ಈ ಪರೀಕ್ಷೆ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಲಾಗಿದೆ.
ತನ್ನ ನೌಕರರ ಕಾರ್ಯದಕ್ಷತೆ ಹೆಚ್ಚಿಸುವುದಕ್ಕಾಗಿ ಶಿಕ್ಷಣ ಇಲಾಖೆ ಕೈಗೊಂಡಿರುವ ಈ ಕ್ರಮವನ್ನು ಶೀಘ್ರವೇ ಇತರ ಇಲಾಖೆಗಳಿಗೂ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ. ಹೌದು ಕಡತಗಳಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ನಮೂದಿಸದೇ ಮಂಡಿಸುತ್ತಿರುವುದು ಕಡತಗಳಲ್ಲಿನ ಟಿಪ್ಪಣಿ ಹಾಳೆಗಳಲ್ಲಿ ಬಹಳಷ್ಟು ಕಾಗುಣಿತ ದೋಷಗಳಿರುವುದು ಕನಿಷ್ಠ ಕಂಪ್ಯೂಟರ್ ಜ್ಞಾನ ಹೊಂದದೇ ಇರುವುದು ಇಲಾಖೆ ಕಾರ್ಯಕ್ಷಮತೆ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿದೆ. ಸಾರ್ವಜನಿಕರು ಹಾಗೂ ನೌಕರರಿಗೂ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ ಎಂಬ ಕೊರಗಿದೆ.ಹೀಗಾಗಿ ಶಿಕ್ಷಣ ಇಲಾಖೆಯ’ಸಿ’ದರ್ಜೆ ನೌಕರನ ಕಾಯಂ ಪೂರ್ವ ಸೇವಾವಧಿ ಘೊಷಣೆ ಮಾಡುವ ಮುನ್ನ ಇಲಾಖಾ ಪರೀಕ್ಷೆಗಳಾದ ಅಕೌಂಟ್ಸ್ ಲೋಯರ್, ಹೈಯರ್ ,ಜನರಲ್ ಲಾ- ಭಾಗ 6, ಕನ್ನಡ ಭಾಷಾ ಪರೀಕ್ಷೆ ಮತ್ತು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಳನ್ನು ಉತ್ತೀರ್ಣ ರಾಗಿರಬೇಕೆಂಬ ಮಾನದಂಡ ನಿಗದಿಪಡಿಸಲಾಗಿರುತ್ತದೆ. ಈ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ,ಕಾಯಂ ಪೂರ್ವ ಸೇವಾವಧಿ ಘೊಷಣೆಯಾಗಿ ಇಲಾಖೆಯಲ್ಲಿ ಅನೇಕ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅಂತಹ ನೌಕರರ ಪೈಕಿ ಬಹುತೇಕರು ಇಲಾಖೆ ನಿಯಮ ಗಳ ಕುರಿತು ಪರಿಪೂರ್ಣ ಜ್ಞಾನ ಹೊಂದದೇ ಇರುವುದು ಕಂಡು ಬಂದಿದೆ.ಹೀಗಾಗಿ ಇನ್ನೂ ಮುಂದೆ ರಾಜ್ಯದ ಎಲ್ಲಾ ಗ್ರೂಪ್’ಸಿ’ವೃಂದದ ನೌಕರರ ಕಾಯಂ ಪೂರ್ವ ಸೇವಾವಧಿ ಘೊಷಣೆ ಮಾಡುವ ಮುನ್ನ ಕಡ್ಡಾಯವಾಗಿ ವೃತ್ತಿ ಬುನಾದಿ ಹಾಗೂ ಇತರ ತರಬೇತಿ ಗಳಿಗೆ ನಿಯೋಜಿಸಬೇಕು ನಿಯ ಮಾನುಸಾರ ಎಲ್ಲಾ ಇಲಾಖಾ ಪರೀಕ್ಷೆಗಳನ್ನು ಉತ್ತೀರ್ಣ ರಾದವರಿಗೆ ಕಾರ್ಯಕ್ಷಮತೆ ಹಾಗೂ ವಿಷಯ ಪರಿಣತಿ ಕುರಿತು ವಿಭಾಗ ಮಟ್ಟದ ಜಂಟಿ ನಿರ್ದೇಶಕರು ಪ್ರತಿ ಮಾಹೆ 100 ಅಂಕಗಳಿಗೆ ಪರೀಕ್ಷೆ ನಡೆಸಬೇಕು ಮತ್ತು ಫಲಿತಾಂ ಶವನ್ನು ಕಾಯಂ ಪೂರ್ವ ಸೇವಾವಧಿ ಘೊಷಣೆ ಮಾಡುವ ಪ್ರಾಧಿಕಾರಕ್ಕೆ ಕಳುಹಿಸಬೇಕು ಎಂದು ಸಾರ್ವಜ ನಿಕ ಶಿಕ್ಷಣ ಇಲಾಖೆ ಆಯುಕ್ತರು ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿ ದ್ದಾರೆ.ಶಿಕ್ಷಣ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ಸಾಕಷ್ಟು ನೌಕರರ ನೇಮಕ ಮಾಡಲಾ ಗಿದೆ.ಈ ನೌಕರರಿಗೆ ಆಡಳಿತದ ಅನುಭವ,ಗಣಕಯಂತ್ರದ ಜ್ಞಾನ, ಭಾಷಾ ಪರಿಣತಿ ತೀರಾ ಕಡಿಮೆ ಇದೆ.ಮತ್ತೆ ಕೆಲವ ರಿಗೆ ಓದಲು ಮತ್ತು ಬರೆಯಲೂ ಬರುವುದಿಲ್ಲ. ಅಂತಹವ ರಿಗೆ ಪರೀಕ್ಷೆ ನಡೆಸಿ ಕಾರ್ಯಕ್ಷಮತೆ ಹೆಚ್ಚಿಸಲು ಪ್ರಯತ್ನ ಮಾಡುತ್ತಿದ್ದೇವೆ.ಶಿಕ್ಷಣ ಇಲಾಖೆ ಸಿ ವರ್ಗದ ನೌಕರರ ಕಾರ್ಯಕ್ಷಮತೆ ಹೆಚ್ಚಿಸಲು ಕೈಗೊಂಡಿರುವ ಕ್ರಮ ಒಳ್ಳೆಯ ದ್ದು.ಬೇರೆ ಇಲಾಖೆಯಲ್ಲೂ ಇಂತಹ ಉಪಕ್ರಮ ಕೈಗೊಳ್ಳ ಲು ಅವಶ್ಯ.ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿದೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಇತ್ತೀಚೆಗೆ ನೇಮಕಾತಿ ನಡೆದಿಲ್ಲ.ಅದರಲ್ಲೂ ವಿಶೇಷವಾಗಿ ‘ಸಿ’ ಗುಂಪಿನ ನೌಕರರ ನೇಮಕವಾಗಿಲ್ಲ.ಆದರೆ ಅನುಕಂಪದ ಆಧಾರದ ಮೇಲೆ 600ಕ್ಕೂ ಹೆಚ್ಚು ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ನೌಕರರು ದ್ವಿತೀಯ ಪಿಯು ಇಲ್ಲವೆ ಪದವಿ ಮಾತ್ರ ಪಡೆದಿದ್ದಾರೆ.ಅವರಿಗೆ ಇಲಾಖೆ,ಸರ್ಕಾರ,ಆಡಳಿತಕ್ಕೆ ಸಂಬಂಧಿಸಿದ ಮಾಹಿತಿ ಕೊರತೆ ಇದ್ದು ಹೀಗಾಗಿ ಶಿಕ್ಷಣ ಇಲಾಖೆ ಪರೀಕ್ಷೆ ನಡೆಸಲು ನಿರ್ಧರಿಸಿದೆ.