ಬೀದರ್ –
ಬೀದರ್ ನ ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಉಪ ನಿರ್ದೇಶಕ ಗಣಪತಿ ಬಾರಾಟಕೆ ಅಧಿಕಾರ ವಹಿಸಿಕೊಂಡರು. ವರ್ಗಾವಣೆ ಗೊಂಡು ಜಿಲ್ಲೆಯ DDPI ಯಾಗಿ ಬಂದ ಇವರನ್ನು ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ವತಿಯಿಂದ ನಗರದ ಉಪ ನಿರ್ದೇಶಕರ ಕಚೇರಿಯಲ್ಲಿ ಬರಮಾಡಿಕೊಂಡು ಆತ್ಮೀಯ ವಾಗಿ ಸನ್ಮಾನಿಸಲಾಯಿತು.ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಕಪಲಾಪೂರೆ ಅವರು ಶಾಲು ಹೊದಿಸಿ ಹೂಮಾಲೆ ಹಾಕಿ ಸತ್ಕರಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ,ಉಪಾಧ್ಯಕ್ಷ ಪಾಂಡುರಂಗ ಬೆಲ್ದಾರ್,ಸಂಘದ ಗೌರವಾಧ್ಯಕ್ಷ ಬಸವ ರಾಜ ಜಕ್ಕಾ,ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ,ಸಂಜುಕುಮಾರ ಸೂರ್ಯವಂಶಿ,ಕ್ಷೇತ್ರ ಶಿಕ್ಷಣಾ ಧಿಕಾರಿ ಸೂರ್ಯಕಾಂತ ಮದಾನೆ,ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧ ರೇತರ ಪ್ರಾಥಮಿಕ ಶಾಲಾ ಮುಖ್ಯೋ ಪಾಧ್ಯಾಯರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯ ದರ್ಶಿ ಮಹಮ್ಮದ್ ನಜೀಬೊದ್ದಿನ್,ಸಂಘಟನಾ ಕಾರ್ಯ ದರ್ಶಿ ಸೈಯದ್ ಅಸ್ಲಂ,ಖಜಾಂಚಿ ನರಸಪ್ಪ ಕೀರ್ತಿ, ಬೀದರ್ ತಾಲ್ಲೂಕು ಘಟಕದ ಗೌರವಾಧ್ಯಕ್ಷೆ ಶೋಭಾವತಿ ಜಂಜೀರೆ,ಅಧ್ಯಕ್ಷ ಬಾಬುರಾವ್ ಮಜಗೆ,ನರಸಪ್ಪ ಹಾಲ ಹಳ್ಳಿ,ವಾಚುಸಿಂಗ್ ರಾಠೋಡ್,ಶೇಕ್ ಅಹಮ್ಮದ್, ಮಕ್ಸೂ ದ್ ಅಲಿ, ಸುಲೋಚನಾ,ವೈಜಿನಾಥ ಸಾಗರ್,ಸುರೇಶ ಟಾಳೆ,ಗಣಪತಿ ಭಕ್ತಾ,ದೇವಿಪ್ರಸಾದ್ ಕಲಾಲ್,ಶ್ರೀಪತಿ ಮೇತ್ರೆ,ಡಿಡಿಪಿಐ ಕಚೇರಿ ಸಿಬ್ಬಂದಿ ಗಳು ಸೇರಿದಂತೆ ಹಲವರು ಈ ಒಂದು ಸಮಯದಲ್ಲಿ ಉಪಸ್ಥಿತರಿದ್ದರು