ರಾಯಚೂರು –
ರಾಯಚೂರು ಜಿಲ್ಲೆಯ ಉಪನಿರ್ದೇಶಕರಾಗಿ(ಅಭಿವೃದ್ಧಿ) ವಿಭಾಗ ಕ್ಕೆ ಎಂ ಎ ರಡ್ಡೇರ ಅವರು ಅಧಿಕಾರವನ್ನು ವಹಿಸಿಕೊಂಡರು.ರಾಯಚೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರು ಅಭಿವೃದ್ಧಿ ಆಗಿ ಅಧಿಕಾರವನ್ನು ವಹಿಸಿಕೊಂಡ ಇವರನ್ನು ರಾಯಚೂರು ಜಿಲ್ಲೆಯ ಶಿಕ್ಷಕರ ಸಂಘದ ಸರ್ವ ಸದಸ್ಯರು ಸ್ವಾಗತಿಸಿ ಕೊಂಡು ಬರಮಾಡಿಕೊಂಡರು.
ಇನ್ನೂ ಈ ಒಂದು ಸಮಯದಲ್ಲಿ ರಾಯಚೂರು ಜಿಲ್ಲಾ ಉಪನಿರ್ದೇಶಕರು(ಆಡಳಿತ)ಗದಗ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿ ಎಂ ಹಿರೇಮಠ ತಾಲೂಕ ಅಧ್ಯಕ್ಷರಾದ ಎಸ್ ಆರ್ ಬಂಡಿ ಗದಗ ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೆ ಎಫ್ ಹಳಿಯಾಳ ಸಂಘದ ಇತರ ಪದಾಧಿಕಾರಿಗಳು ಹಾಗೂ ಗದಗ ಗ್ರಾಮೀಣ ತಾಲೂಕಿನ ಬಿಆರ್ ಪಿಸಿ,ಆರ್ ಪಿ ಗಳು ಹಾಗೂ ರಾಯಚೂರು ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಉಪನ್ಯಾಸಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ವೇಳೆ ಅಧಿಕಾರ ವಹಿಸಿಕೊಂಡು ಮಾತನಾಡಿಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಕಾರ್ಯಗಳನ್ನು ಪೂರಕವಾದ ಯೋಜನೆಗಳನ್ನು ಹಮ್ಮಿಕೊಂಡು ಗುಣಾ ತ್ಮಕ ಶಿಕ್ಷಣಕ್ಕಾಗಿ ಶ್ರಮಿಸೋಣ ಎಂದು ಕರೆ ನೀಡಿದರು. ಇನ್ನೂ ಅತ್ತ ಗದಗ ಗದಗ್ ಜಿಲ್ಲೆಯಿಂದ ಮತ್ತು ಗದಗ ಗ್ರಾಮೀಣ ತಾಲೂಕಿನಿಂದ ಆತ್ಮೀಯ ವಾಗಿ ಬೀಳ್ಕೊಡುಗೆ ಯನ್ನು ಮಾಡಲಾಯಿತು.ಇತ್ತ ರಾಯಚೂರು ಜಿಲ್ಲೆಯಿಂದ ಸ್ವಾಗತ ಕಾರ್ಯಕ್ರಮವನ್ನು ಮಾಡಲಾಯಿತು