ಚಾಮರಾಜನಗರ –
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ವಡಕೆ ಹಳ್ಳ ಸರ್ಕಾರಿ ಉನ್ನತೀಕರಿಸಿದ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ಮಕ್ಕಳು ಅಸ್ವಸ್ಥಗೊಂಡ ಪ್ರಕರಣದ ಬೆನ್ನಲ್ಲೇ ಈಗ ನಿರ್ಲಕ್ಷ್ಯ ವನ್ನು ತೋರಿದ ಶಿಕ್ಷಕರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಬಿಇಓ ಸೂಚನೆ ನೀಡಿದ್ದಾರೆ ಹೌದು ಕಳೆದ ವಾರ ಶಾಲೆಯಲ್ಲಿ ಮಧ್ಯಾಹ್ನ ಸಾಂಬರಿಗೆ ಹಲ್ಲಿ ಬಿದ್ದ ಬಿಸಿಯೂಟವನ್ನು ಸೇವಿಸಿ 70 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದರು.ರಾಮಾಪುರ ಹಾಗೂ ಕೌದಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು ಈ ವೇಳೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದರು.ಮಕ್ಕಳು ಊಟವನ್ನು ಸೇವನೆ ಮಾಡಿ ಇದರಲ್ಲಿ ಕೆಲ ಮಕ್ಕಳು ವಾಂತಿ ಮಾಡಿ ಕೊಂಡಿದ್ದರು.ಈ ಬಗ್ಗೆ ತಿಳಿದ ಅಡುಗೆ ಸಿಬ್ಬಂದಿ ಹಾಗೂ ಶಿಕ್ಷಕರು ಪೋಷಕರು ಯಾವುದೇ ಮಾಹಿತಿ ತಿಳಿಸಿರಿರಲಿಲ್ಲ ಅಲ್ಲದೆ ಈ ಬಗ್ಗೆ ಮನೆಯವರು ಹೇಳಬಾರದು ಎಂದು ಮಕ್ಕಳಿಗೆ ಬೆದರಿಕೆ ಒಡ್ಡಿದ್ದರಂತೆ.ಈ ಎಲ್ಲಾ ವಿಚಾರವನ್ನು ತಿಳಿದು ಶಾಲೆಗೆ ಆಗಮಿಸಿದ ನಂತರ ಪೋಷಕರ ಗಲಾಟೆ ಮಾಡಿ ಪ್ರತಿಭಟನೆ ಮಾಡಿದ್ದರು ಈಗಾಗಲೇ ಅಡುಗೆ ಸಿಬ್ಬಂದಿ ಯವರನ್ನು ಅಮಾನತು ಮಾಡಲಾಗಿದ್ದು ಈಗ ಶಿಕ್ಷಕರ ಮೇಲೂ ಸೂಕ್ತ ಕ್ರಮಕ್ಕೆ ಬಿಇಓ ಸೂಚನೆ ನೀಡಿ ದ್ದಾರೆ
ಹೌದು ಶಿಕ್ಷಕರಿಗೆ ವರ್ಗಾವಣೆಯನ್ನು ಮಾಡುವಂತೆ ಶಿಕ್ಷೆ ಯನ್ನು ನೀಡಿದ್ದು ಇನ್ನೂ ಅಧಿಕಾರಿಗಳಿಗೆ ಮೇಲೆ ಕ್ರಮ ಕೈಗೊಳ್ಳಿ ಎಂದು BEO ಸೂಚನೆ ನೀಡಿದ್ದಾರೆ.ಗ್ರಾಮಸ್ಥರ ಆಕ್ರೋಶಕ್ಕೆ ಸ್ಪಂದಿಸಿ ಕ್ರಮಕೈಗೊಳ್ಳಲು ಈ ಒಂದು ಸೂಚನೆಯನ್ನು ನೀಡಿದ್ದಾರೆ.ಹಿರಿಯ ಅಧಿಕಾರಿಗಳನ್ನು ಶಿಕ್ಷರನ್ನು ವರ್ಗಾಹಿಸುವ ಸಂಬಂಧ ಕ್ರಮ ಕೈಗೊಳ್ಳಲಾಗು ವುದು ಹಾಗೆಯೇ ಅಡುಗೆ ಸಿಬ್ಬಂದಿ ಯವರನ್ನು ತಕ್ಷಣ ದಿಂದಲೆ ಕೆಲಸದಿಂದ ವಜಾಗೂಳಿಸಲಾ ಗುವುದು ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ ಅಕ್ಷರದಾಸೋಹದ ನೂಡಲ್ ಅಧಿಕಾರಿ ಗುರುಸ್ವಾಮಿ ಸಿಆರ್ ಪಿ ಗುರುಸ್ವಾಮಿ ಪ್ರಾಥಮಿಕ ಶಾಲಾ ಅದ್ಯಕ್ಷರ ಸಂಘ ಅದ್ಯಕ್ಷ ಗಿರೀಶ್ ಮುಖಂಡ ಮಣಿ ಸೇರಿದಂತೆ ಇನ್ನಿತರರು ಹಾಜರಿದ್ದರು ಜೊತೆಗೆ ಶಿಕ್ಷಕರ ವರ್ಗಾವಣೆಗೆ ಅಗತ್ಯ ಕ್ರಮ ಕೈಗೊಳ್ಳ ಲಾಗಿದೆ ಎಂದು ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಆರ್ ಸ್ವಾಮಿ ತಿಳಿಸಿದರು