ವಿಜಯಪುರ –
ಇಬ್ಬರು ಶಿಕ್ಷಕರ ಮೇಲೆ ದುಷ್ಕರ್ಮಿಗಳು ಹಲ್ಲೆ ಯನ್ನು ಮಾಡಿದ ಘಟನೆ ವಿಜಯಪುರ ದಲ್ಲಿ ನಡೆದಿದೆ ಹೌದು ಎಸ್ ಎಸ್ ಯಾದವಾಡ ಮತ್ತು ಡಿ ಎಸ್ ಹೊರ್ತಿ ಎಂಬ ಇಬ್ಬರು ಶಿಕ್ಷಕರ ಮೇಲೆ ಹಲ್ಲೆ ಯನ್ನು ದುಷ್ಕರ್ಮಿಗಳು ಹಲ್ಲೆ ಯನ್ನು ಮಾಡಿದ್ದಾರೆ.ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆ ರಾಮಾಬಾಯಿ ಯಲ್ಲಿ ಕರ್ತವ್ಯ ವನ್ನು ನಿರ್ವಹಿ ಸುತ್ತಿದ್ದಾರೆ.ಕಾರಣವಿಲ್ಲದೆ ಈ ಇಬ್ಬರು ಶಿಕ್ಷಕರ ಮೇಲೆ ಕಂಠ ಪೂರ್ತಿಯಾಗಿ ಕುಡಿದಿದ್ದ ಪ್ರಕಾಶ ಮಲ್ಲಣ್ಣ ಸಂಖ ಎಂಬ ವ್ಯಕ್ತಿ ಶಾಲಾ ಆವರಣದಲ್ಲಿ ಹಲ್ಲೆ ಯನ್ನು ಮಾಡಿದ್ದಾರೆ ಶಿಕ್ಷಕರ ಮೇಲೆ ನಡೆದ ಈ ಒಂದು ಹಲ್ಲೆ ಗೆ ಖಂಡನೆ ವ್ಯಕ್ತ ವಾಗಿದ್ದು ಘಟನೆ ಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚಡಚಣ ಇವರು ಖಂಡಿಸಿ ಪ್ರತಿಭಟನೆ ಮಾಡಿದರು
ತಾಲ್ಲೂಕಿನ ನೌಕರರ ಸಂಘದ ವತಿಯಿಂದ ಘಟನೆ ಯನ್ನು ಖಂಡಿಸಿ ಚಡಚಣ ಪಟ್ಟಣದಲ್ಲಿ ಹಲವು ಕಡೆಗಳಲ್ಲಿ ಪ್ರತಿಭಟನೆ ಮಾಡಲಾಯಿತು
ಕರ್ತವ್ಯದ ಮೇಲೆ ಇದ್ದ ಸಮಯದಲ್ಲಿ ಇಬ್ಬರು ಶಿಕ್ಷಕರ ಮೇಲೆ ನಡೆದ ಹಲ್ಲೆ ಯನ್ನು ಖಂಡಿಸಿದ ಚಡಚಣ ತಾಲ್ಲೂಕಿನ ನೌಕರರ ಸಂಘ ಅಧ್ಯಕ್ಷರ ಮತ್ತು ಸರ್ವ ಸದಸ್ಯರ ಮತ್ತು ತಾಲ್ಲೂಕಿನ ನೌಕರರ ಮತ್ತು ಶಿಕ್ಷಕರ ಸಂಘಟನೆಯ ನೇತೃತ್ವದಲ್ಲಿ ಈ ಒಂದು ಪ್ರತಿಭಟನೆ ಮಾಡಿ
ತಹಶಿಲ್ದಾರ,ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ಹಲವರಿಗೆ ಮನವಿಯನ್ನು ನೀಡಲಾಯಿತು. ಕೂಡಲೇ ದುಷ್ಕರ್ಮಿ ಗಳನ್ನು ಬಂಧನ ಮಾಡುವಂತೆ ಒತ್ತಾಯವನ್ನು ಮಾಡಿ ಶಿಕ್ಷಕರಿಗೆ ಸೂಕ್ತ ಭದ್ರತೆ ನೀಡುವಂತೆ ಆಗ್ರಹ ವನ್ನು ಮಾಡಲಾಯಿತು