ಕೊಡಗು –
73 ನೇ ಗಣರಾಜ್ಯೋತ್ಸವ ಸಂದೇಶವನ್ನು ಓದುವಾಗ ಶಿಕ್ಷಣ ಸಚಿವರು ಎಡವಟ್ಟು ಮಾಡಿದ ಘಟನೆ ಕೊಡಗಿ ನಲ್ಲಿ ನಡೆದಿದೆ.ಧ್ವಜಾರೋಹಣ ಮಾಡಿದ ನಂತರ ಭಾಷಣ ವನ್ನು ಸಚಿವರು ಮಾಡುವ ಸಮಯದ ವೇಳೆ ಎಡವಟ್ಟು ಮಾಡಿದ್ದಾರೆ.ಗಣರಾಜ್ಯೋತ್ಸವದ ಸಂದೇಶ ಓದುವ ವೇಳೆ ಸಚಿವರು ಕೊಡಗು ಜಿಲ್ಲೆಯನ್ನು ಕೊರಕು ಜಿಲ್ಲೆ ಎಂದು ದುರಸ್ತಿ ಎಂಬುದನ್ನು ದುಃಸ್ಥಿತಿ ಎಂದು ಹಾಗೇ ವಿತರಿಸ ಲಾಗಿದೆ ಎಂಬುದನ್ನು ವಿಸ್ತರಿಸಲಾಗಿದೆ’ ಎಂದು ಓದಿದರು

ಇನ್ನೂ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಹೆಸರು ಪ್ರಸ್ತಾಪಿಸುವಾಗಲೂ ಮೀನಾ’ ಎಂದು ಹೇಳಿದರು ಕೊಡಗು ಜಿಲ್ಲೆಯಲ್ಲಿ 73 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಮಾಡುವಾಗ ಕೊಡಗು ಉಸ್ತುವಾರಿ ಸಚಿವ ಬಿ,ಸಿ ನಾಗೇಶ್ ಅವರಿಂದ ಈ ಒಂದು ಎಡವಟ್ಟು ಗಳು ಕಂಡು ಬಂದವು.ಮಡಿಕೇರಿಯ ಜಿಲ್ಲಾ ಕ್ರೀಡಾಂಗಣ ನಡೆದ ಧ್ವಜಾರೋಹಣದಲ್ಲಿ ಕಂಡು ಬಂದವು.