ಬೆಂಗಳೂರು –
ಬೆಂಗಳೂರಿನ ಬ್ಯಾಡರಹಳ್ಳಿ ಮುಖ್ಯ ರಸ್ತೆಯಲ್ಲಿ ಅಪಘಾತ ದಿಂದ ಮೃತರಾದ ಶಿಕ್ಷಕಿ ಯ ಘಟನೆ ಗೆ ಖಂಡನೆ ವ್ಯಕ್ತವಾ ಗಿದ್ದು ರಸ್ತೆಯಲ್ಲಿನ ಗುಂಡಿಯಿಂದ ಸಂಭವಿಸಿದ ಅಪಘಾತ ದಲ್ಲಿ ಶಿಕ್ಷಕಿ ಶರ್ಮಿಳಾ ರವರು ಮೃತಪಟ್ಟಿರುವುದನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿಯು ಬೃಹತ್ ಪ್ರತಿಭಟನೆ ನಡೆಸಿದರು,ಬಿಬಿಎಂಪಿ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಪಘಾತ ನಡೆದ ಸ್ಥಳದಲ್ಲಿ ಪ್ರತಿಭ ಟನೆಯೊಂದಿಗೆ ವಾಗ್ದಾಳಿ ಮಾಡಿದರು

ಇನ್ನೂ ರಸ್ತೆ ಗುಂಡಿಗೆ ಶಿಕ್ಷಕಿ ಶರ್ಮಿಳಾ ಬಲಿಯಾಗಿರುವು ದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಎಎಪಿ ಮುಖಂಡ ರನ್ನು ಪೊಲೀಸರು ಬಂಧಿಸಿ ಮೊಕದ್ದಮೆ ದಾಖಲಿಸಿದರು. ಪೊಲೀಸ್ ಇಲಾಖೆಯ ಜಂಟಿ ಆಯುಕ್ತರು ಠಾಣೆಗೆ ಆಗಮಿಸಿ ಮುಖಂಡರ ಜೊತೆಗೆ ಮಾತುಕತೆ ನಡೆಸಿದರು. ಪಕ್ಷ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಎಚ್.ಡಿ.ಬಸವರಾಜು, ಮೋಹನ್ ದಾಸರಿ, ಜಗದೀಶ್ ವಿ ಸದಂ ಇನ್ನಿತರ ಮುಖಂಡರನ್ನು ಬಂಸಲಾಯಿತು.


ಇನ್ನೂ ಹಲವು ಬಾರಿ ಮನವಿ ನೀಡಿದರೂ ಕೂಡಾ ಗುಂಡಿ ಮುಚ್ಚಲು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ಆಕ್ರೋಶ ವ್ಯಕ್ತಪಡಿಸಿದರು.


ಸಾವಿಗೆ ಕಾರಣರಾದ ಶಾಸಕ ಎಸ್.ಟಿ.ಸೋಮಶೇಖರ್, ಬಿಬಿಎಂಪಿ ಮುಖ್ಯ ಆಯುಕ್ತ ಸೇರಿದಂತೆ ಹಲವರ ಮೇಲೆ ಆಮ್ ಆದ್ಮಿ ಪಾರ್ಟಿಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ನಿರ್ಲಕ್ಷ್ಯದಿಂದಾಗಿ ಜನರ ಸಾವಿಗೆ ಕಾರಣ ವಾದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.