ಶಿವಮೊಗ್ಗ –
ಮನೆಯಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆಯ ಜಾಲವೊಂದು ಶಿವಮೊಗ್ಗ ದಲ್ಲಿ ಪತ್ತೆಯಾಗಿದೆ.ಹೌದು ಅಡ್ಡೆ ಮೇಲೆ ಮಹಿಳಾ ಠಾಣೆಯ ಪೋಲಿಸರು ದಾಳಿ ಮಾಡಿ ವೃದ್ಧ ಸೇರಿ ಇಬ್ಬರನ್ನೂ ಬಂಧಿಸಿ ಮೂವರು ಮಹಿಳೆ ಯರನ್ನು ರಕ್ಷಿಸಿದ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.ದುರ್ಗಿಗುಡಿ ಕೆ.ಎಚ್.ಶಂಕರ್ ಮತ್ತು ಭೋಜಪ್ಪ ಕ್ಯಾಂಪ್‌ನ ಮುನಿಯಪ್ಪ ಎಂಬುವರಾಗಿದ್ದಾರೆ.ಖಚಿತ ಮಾಹಿತಿ ಮೇರೆಗೆ ನಗರದ ಹೊರವಲಯದಲ್ಲಿ ತೋಟದ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದರು.ದಾಳಿ ವೇಳೆ ಬೆಂಗಳೂರಿನ 38 ವರ್ಷದ ಮಹಿಳೆ,ತೀರ್ಥಹಳ್ಳಿಯ 28 ವರ್ಷದ ಯುವತಿ ಹಾಗೂ ಕುಂದಾಪುರ ತಾಲೂಕಿನ 22 ವರ್ಷದ ಯುವತಿಯನ್ನ ರಕ್ಷಣೆ ಮಾಡಲಾಗಿದೆ


ಸೊಗಾನೆ ಬಳಿಯಿರುವ ಭೋಜಪ್ಪ ಕ್ಯಾಂಪ್‌ನ ತೋಟದ ಮನೆಯಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ಕಾರ್ಯಾಚರಣೆ ಯನ್ನ ಮಾಡಿದ್ದು ಮಹಿಳಾ ಠಾಣೆ ಇನ್ಸ್ಪೆಕ್ಟರ್ ವೀರೇಶ್ ಅವರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ ಒಂದು ಬೈಕ್‌ನ್ನು ಜಪ್ತಿ ಮಾಡಿದ್ದು ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.