ಕಲಬುರಗಿ –
ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಬಳೂರ್ಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 32 ವಿದ್ಯಾರ್ಥಿಗಳಿಗೆ ಮಹಾಮಾರಿ ಕೊರೋನಾ ಕಂಡು ಬಂದಿದೆಯಂತೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಂಡು ಬಂದರು ಕೂಡಾ ಯಾವುದೇ ರೀತಿಯ ಕ್ರಮಗಳನ್ನು ಅಧಿಕಾರಿಗಳು ಆಗಲಿ ಇಲಾಖೆಯವರಾಗಲಿ ಕೈಗೊಂಡಿಲ್ಲ ವಂತೆ ಇದನ್ನು ಸ್ವತಃ ಶಾಲೆಯ ಶಿಕ್ಷಕರು ಸಾಮಾಜಿಕ ಜಾಲ ತಾಣಗಳಲ್ಲಿ ಹೇಳಿಕೊಂಡಿದ್ದಾರೆ

ಸಧ್ಯ ಶಾಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿ ಗಳಲ್ಲಿ ಕರೋನ ಸೋಂಕು ದೃಢ ವಾಗಿದ್ದರು ಕೂಡಾ ಯಾವೊಬ್ಬ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡದೆ ಇರುವುದು ವಿಪರ್ಯಾಸದ ಸಂಗತಿ ಎಂದು ಉಲ್ಲೇಖ ವನ್ನು ಮಾಡಿ ಸಂದೇಶ ವನ್ನು ಹಾಕಿದ್ದಾರೆ

ಅಲ್ಲದೇ ತಾಲೂಕಿನ ಶಿಕ್ಷಣ ಇಲಾಖೆಯ ಮುಖ್ಯಸ್ಥರು ಶಾಲು ಸನ್ಮಾನದಲ್ಲಿ ಮಗ್ನರಾಗಿದ್ದಾರೆಂದು ಉಲ್ಲೇಖ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಸಂದೇಶ ವೊಂದನ್ನು ಹಾಕಿದ್ದಾರೆ.ಒಟ್ಟಾರೆ ಏನೇ ಆಗಲಿ ಕರೋನ ಮಹಾಮಾರಿ ಶಾಲೆಯಲ್ಲಿ ಸ್ಫೋಟ ವಾಗಿದ್ದು ಇನ್ನಾದರು ಅಧಿಕಾರಿಗಳು ಇತ್ತ ನೋಡಿ ಸಮಸ್ಯೆ ದೊಡ್ಡ ಸಮಸ್ಯೆ ಆಗುವ ಮುನ್ನ ಸ್ಪಂದಿಸಬೇಕಿದೆ.