ಮೈಸೂರು –
ಮೈಸೂರಿನ ಇಬ್ಬರು ಪಿಎಸ್‌ಐಗಳ ಲವ್ವಿ ಡವ್ವಿ ಕಹಾನಿ ಈಗ ಇಲಾಖೆಯ ಮರ್ಯಾದೆಯನ್ನು ತೆಗೆಯುತ್ತಿದೆ. ಹೌದು ಕಾನೂನು ರಕ್ಷಣೆ ಮಾಡಿ ಪರಿಪಾಲಿಸಬೇಕಾದ ಖಾಕಿಯಿಂದಲೇ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ನೊಂದವರಿಗೆ ನ್ಯಾಯ ಒದಗಿಸಬೇಕಾದ ಆ ಮಹಿಳಾ ಪೊಲೀಸ್ ಅಧಿಕಾರಿಯೇ ಸಂತ್ರಸ್ಥೆಯಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಮೊರೆ ಹೋಗಿದ್ದಾಳೆ.ಮಹಿಳಾ ಸಬ್ ಇನ್ಸ್‌ಪೆಕ್ಟರ್ ಮೇಲೆ ಲೈಂಗಿಕ ದೌರ್ಜನ್ಯ, ಎನ್ ಆರ್ ಠಾಣೆ ಪಿಎಸ್‌ಐ ಆನಂದ್ ವಿರುದ್ದ ವಂಚನೆ ಆರೋಪ. ನ್ಯಾಯಕ್ಕಾಗಿ ಅಲೆದಾಡುತ್ತಿರುವ ಖಾಕಿತೊಟ್ಟ ಮಹಿಳಾ ಅಧಿಕಾರಿ.

ಇದೊಂದು ನಿಜಕ್ಕೂ ಶಿಸ್ತಿಗೆ ಹೆಸರಾದ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಹ ವಿಚಾರ. ಸಾರ್ವಜನಿಕರಿಗೆ ರಕ್ಷಣೆಗಾಗಿ ಖಾಕಿ ತೊಟ್ಟ ಅಧಿಕಾರಿಯಿಂದಲೇ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಅತ್ಯಾಚಾರವೆಸಗಿ , ವಂಚನೆ, ಕೊಲೆ ಬೆದರಿಕೆ ಆರೋಪ ಬಂದಿದೆ. ಇಬ್ಬರು ಅಧಿಕಾರಿಗಳ ವರ್ತನೆ ಹಿರಿಯ ಪೊಲೀಸ್ ಅಧಿಕಾರಿಗಳು ಮುಜುಗರಕ್ಕೊಳಗಾಗುವಂತೆ ಮಾಡಿದೆ.

ಇಂಥಹದೊಂದು ಖಾಕಿ ಅಧಿಕಾರಿಗಳ ಲವ್ವಿ ಡವ್ವಿ ಕಹಾನಿಯ ಹೌದು..ಈ ಫೋಟೋದಲ್ಲಿರುವ ಪೊಲಿಸ್ ಅಧಿಕಾರಿ ಹೆಸರು ಆನಂದ್. ಮೈಸೂರು ನಗರದ ಎನ್‌ಆರ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಈತ ತನ್ನ ಕರ್ತವ್ಯ ಮರೆತು, ಸ್ನೇಹಿತೆಯಾಗಿದ್ದ ವಿವಿ ಪುರಂ ಠಾಣೆಯ ಮಹಿಳಾ ಪೊಲೀಸ್ ಸಬ್ ಇನಸ್ಪೇಕ್ಟರ್ ಜೊತೆ ಪ್ರೇಮ್ ಕಹಾನಿ ಶುರು ಮಾಡಿಕೊಂಡಿದ್ದ. ಈ ಪ್ರೇಮ್ ಕಹಾನಿ ಲವ್ವು ಡವ್ವು ದೈಹಿಕ ಸಂಪರ್ಕದವರೆಗೂ ಬೆಳೆದು ಸ್ವಚ್ಚಂದ ಪ್ರೇಮಿಗಳಂತೆ ಮೈಸೂರು ತುಂಬಾ ವಿಹರಿಸಿದ್ರು.

ಮದುವೆ ವಿಚಾರ ಬಂತು ನೋಡಿ ಆಗ ಆನಂದನ ಬಣ್ಣ ಬಯಲಾಗಿದೆ.ಮದುವೆ ವಿಚಾರ ಬರುವ ಮುನ್ನವೆ ಆ ಮಹಿಳಾ ಪೊಲೀಸ್ ಅಧಿಕಾರಿ ಆನಂದ ಬಳುವಳಿಯಾಗಿ ಗರ್ಭವತಿಯಾಗಿದ್ದಳು. ಮದುವೆ ಪ್ರಸ್ತಾಪ ಎತ್ತುತ್ತಿದ್ದಂತೆ ಪ್ರೇಯಸಿ ಸಬ್ ಇನಸ್ಪೇಕ್ಟರ್ ಅವಾಯ್ಡ್ ಮಾಡಲು ಶುರು ಮಾಡಿದ್ದಾನೆ. ಗರ್ಭಪಾತ ಮಾಡಿಸಿಕೊಳ್ಳುವಂತೆ ಬೆದರಿಕೆ ಹಾಕಿದ್ದಾನೆ, ಒಪ್ಪದಿದ್ದಾಗ ಹಾರ್ಲಿಕ್ಸ್, ಡ್ರೈ ಫ್ರೂಟ್ಸ್‌ನಲ್ಲಿ ಮಾತ್ರೆಗಳನ್ನ ಹಾಕಿ ಬಲವಂತವಾಗಿ ಅಬಾಷನ್ ಮಾಡಿಸಿರುವುದಾಗಿ ಆರೋಪಿಸಿ ನೊಂದ ಮಹಿಳಾ ಅಧಿಕಾರಿ ಮೈಸೂರಿನ ವಿಜಯನಗರ ಠಾಣೆಗೆ ದೂರು ನೀಡಿದ್ದಾರೆ.


ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಪೊಲೀಸರು ಐಪಿಸಿ ಸೆಕ್ಷನ್ 306, 406, 313, 354, 417, 504, 506 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಈ ನಡುವೆ ಆನಂದ್ ಬೇರೊಂದು ಯುವತಿಯ ಜೊತೆ ಮದುವೆಗೆ ಸಿದ್ದತೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಸದ್ಯ ಆನಂದ್ ವಿರುದ್ದ ಕೊಲೆ ಬೆದರಿಕೆಯ ಗಂಭೀರ ಮಾಡುತ್ತಿರುವ ಮಹಿಳಾ ಎಸ್‌ಐ ನ್ಯಾಯಾಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಇನ್ನೂ ಶಿಸ್ತು ಸಂಯಮ ಮೆರೆಯಬೇಕಿದ್ದ ಈ ಯುವ ಪೊಲೀಸ್ ಅಧಿಕಾರಿಗಳಿಬ್ಬರ ಪ್ರೇಮದಾಟ ಪೊಲೀಸ್ ಇಲಾಖೆಯ ಘನತೆ, ಗೌರವಕ್ಕೆ ಮಸಿ ಬಳಿಯುವಂತಾಗಿದೆ.

ಪ್ರಕರಣ ಸಂಬಂಧ ಸತ್ಯಾಸತ್ಯತೆಗಳನ್ನ ಅರಿಯಲು ಹಿರಿಯ ಅಧಿಕಾರಿಗಳೇ ಮಧ್ಯ ಪ್ರವೇಶಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ನ್ಯಾಯ ಒದಗಿಸುವ ಈ ಇಬ್ಬರ ಲವ್ವಿ ಡವ್ವಿ ಬೀದಿಗೆ ಬಿದ್ದಿದ್ದು, ಪಿಎಸ್‌ಐ ಆನಂದ್ ತನ್ನ ಪ್ರೇಯಸಿ ಎಸ್‌ಐನ ಕೈ ಹಿಡಿಯುತ್ತಾರ ಅಥವಾ ಕೈ ಕೊಡ್ತಾರ ಕಾದು ನೋಡಬೇಕಿದೆ.ಇವೆಲ್ಲದರ ನಡುವೆ ಕೂಡಲೇ ಹಿರಿಯ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಇಬ್ಬರ ನಡುವಿನ ಸಮಸ್ಯೆಗೆ ನಾಂದಿ ಹಾಡಿ ನೊಂದ ಮಹಿಳಾ ಪೊಲೀಸ್ ಅಧಿಕಾರಿಗೆ ನ್ಯಾಯ ದೊರಕಿಸಿ ಕೊಟ್ಟು ಇಲಾಖೆಯ ಮಾನ ಮರ್ಯಾದೆಯನ್ನು ಕಾಪಾಡುವುದು ಅವಶ್ಯಕವಿದೆ ಇದನ್ನು ಇಲಾಖೆಯ ಹಿರಿಯ ಅದಿಕಾರಿಗಳು ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.