ದಾವಣಗೆರೆ –
ಹಿಜಾಬ್ ಗದ್ದಲದ ನಡುವೆ ನಾಳೆಯಿಂದ ರಾಜ್ಯದಲ್ಲಿ ಮತ್ತೆ ನಾಳೆಯಿಂದ ಶಾಲೆಗಳು ಆರಂಭವಾಗುತ್ತಿದ್ದು ಶಾಲಾ ಆವರಣದಲ್ಲಿ ಮೊಬೈಲ್ ಬಳಕೆಯನ್ನು ದಾವಣಗೆರೆ ಜಿಲ್ಲಾಧಿಕಾರಿ ನಿಷೇಧ ಮಾಡಿದ್ದಾರೆ.ಹೌದು ದಾವಣಗೆರೆ ಯಲ್ಲಿ ಪೂರ್ವ ಸಿದ್ದತಾ ಸಭೆ ನಡೆಸಿದ ಅವರು ನಾನೂ ಸೇರಿದಂತೆ ವಿವಿಧ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡುತ್ತೇವೆ.ಈಗಾಗಲೇ ಆದೇಶ ಹೊರಡಿಸಿ ಶಾಲಾ ಕಾಲೇಜಿನ ಆವರಣವನ್ನು ಶಿಕ್ಷಕರು,ಬೋಧಕೇತರ ಸಿಬ್ಬಂದಿ,ವಿದ್ಯಾರ್ಥಿಗಳು,ಅನಿವಾರ್ಯ ಸಂದರ್ಭದಲ್ಲಿ ಪೋಷಕರನ್ನು ಹೊರತುಪಡಿಸಿ ಬೇರೆಯವರು ಪ್ರವೇಶ ಮಾಡಬಾರದು ಎಂದು ನಿರ್ದೇಶನ ನೀಡಲಾಗಿದೆ.ಇನ್ನೂ ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಿ ಆದೇಶ ಹೊರ ಡಿಸಲಾಗಿದೆ ಎಂದರು

ಇನ್ನೂ ವಿವಿಧ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿ ಹೋರಾಟದಲ್ಲಿ ಭಾಗಿಯಾಗಿರುವ ಕೆಲ ವಿದ್ಯಾರ್ಥಿ ಗಳನ್ನ ಮುಂದಿನ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಳಿಸು ವುದಾಗಿ ಬೆದರಿಸಿರುತಾರೆಂದು ದೂರು ನೀಡಿದ್ದು ಯಾರಾ ದರು ಶಿಕ್ಷಕರು ಆ ರೀತಿ ನಡೆದುಕೊಂಡಿದ್ದರೆ ಅಂತಹ ಶಿಕ್ಷಕರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.ದಾವಣಗೆರೆ ಜಿಲ್ಲೆಯ ಪದವಿ ತರಗತಿಗಳಲ್ಲಿ 30828,ಪಿಯು ತರಗತಿಗಳಲ್ಲಿ 38190 ಹಾಗೂ ಪ್ರೌಢ ಶಾಲೆಗಳಲ್ಲಿ 1 ಲಕ್ಷ 18 ಸಾವಿರ ವಿಧ್ಯಾರ್ಥಿಗಳಿದ್ದು ಇವರ ಭವಿಷ್ಯ ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
“