ಬೆಂಗಳೂರು –
ವಾರ್ಷಿಕ ರಜೆಗೆ ಕತ್ತರಿ ಹಾಕಲಾಗುತ್ತಿದೆ ಎಂಬ ಅನುಮಾನ ದಟ್ಟವಾಗಿದೆ ಹೌದು ಕೊರೊನಾ ಬರುವ ಮುನ್ನ ಎಪ್ರಿಲ್ 10ರಿಂದ ಮೇ 30ರ ವರೆಗೆ ಶಾಲೆಗಳಿಗೆ ರಜೆ ಇತ್ತು.ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಮತ್ತು ಮಾನಸಿಕ ಸಿದ್ಧತೆಗಾಗಿ ಈ ರಜೆಯನ್ನು ನಿಗದಿಪಡಿಸಲಾಗಿದೆ.1ರಿಂದ 5ನೇ ತರಗತಿಗೆ 200 ಶಾಲಾ ದಿನ ಮತ್ತು 5ರ ಮೇಲ್ಪಟ್ಟ ವರಿಗೆ 220 ದಿನಗಳ ಲೆಕ್ಕಾಚಾರವಿದೆ.ಆದರೆ ಬೇರೆ ಎಲ್ಲೂ ಇಲ್ಲದೆ ಕರ್ನಾಟಕದಲ್ಲಿ ಮಾತ್ರ 240 ದಿನಗಳ ಶೈಕ್ಷಣಿಕ ಅವಧಿ ಇಡಲಾಗಿದೆ.ಹೀಗಾಗಿ ಎಪ್ರಿಲ್ 30ರ ವರೆಗೆ ರಾಜ್ಯ ದಲ್ಲಿ ಶೈಕ್ಷಣಿಕ ಅವಧಿ ತೋರಿಸಲಾಗಿದೆ.ಇದರಿಂದಾಗಿ 50 ದಿನ ರಜೆ ಪಡೆಯುತ್ತಿದ್ದ ಮಕ್ಕಳಿಗೆ ಈ ಬಾರಿ 30 ದಿನ ಮಾತ್ರ (ಮೇ ತಿಂಗಳು) ರಜೆ ಎಂದು ತಿಳಿಸಲಾಗಿದೆ.ಹಲವು ವರ್ಷಗಳ ಹಿಂದೆ ದಸರಾ ರಜೆ 20 ದಿನ ಇತ್ತು.ಈ ಬಾರಿ 10 ದಿನ ರಜೆ ನೀಡಿದ್ದರೂ ಸಿಕ್ಕಿದ್ದು ನಾಲ್ಕು ದಿನ ಮಾತ್ರ ಎಂಬುದು ಶಿಕ್ಷಕರೊಬ್ಬರ ಅಭಿಪ್ರಾಯ.
ಹೌದು 1 ರಿಂದ 9ನೇ ತರಗತಿ ಮಕ್ಕಳಿಗೆ ಪರೀಕ್ಷೆಯನ್ನು SSLC ಪರೀಕ್ಷೆಗೆ ಮುನ್ನ ನಡೆಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.ಈ ಬಗ್ಗೆ ಸರಕಾರ ತೀರ್ಮಾನ ಕೈಗೊಳ್ಳಲಿದೆ. ಸರಕಾರದ ಸೂಚನೆಯ ಪ್ರಕಾರ ಪರೀಕ್ಷಾ ಸಿದ್ಧತೆ ನಡೆಸಲಾ ಗುವುದು ಎಂಬ ಮಾತುಗಳು ಕೇಳಿ ಬರುತ್ತಿದ್ದು ಏನೇನಾ ಗಲಿದೆ ಎಂಬೊಂದನ್ನು ಕಾದು ನೋಡಬೇಕು