ದಾವಣಗೆರೆ –
ಹಿಜಾಬ್-ಕೇಸರಿ ಶಾಲು ಗಲಾಟೆ ನಂತರ ಇಂದು ಶಾಲೆಗಳು ಆರಂಭಗೊಂಡ ಹಿನ್ನಲೆಯಲ್ಲಿ ಜಿಲ್ಲೆಯ ವಾತಾವರಣ ತಿಳಿಯಾಗೋವರೆಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ರಜೆ ಯನ್ನು ಕ್ಯಾನ್ಸಲ್ ಮಾಡಲಾಗಿದೆ. ಹೌದು ಡಿಡಿಪಿಐ, ಡಿಡಿಪಿಯು,ಬಿಇಓ,ಬಿಆರ್ ಸಿ ಕೋಆರ್ಡಿನೇಟರ್ ಗಳ ರಜೆಯನ್ನು ಕ್ಯಾನ್ಸಲ್ ಮಾಡಿ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶವನ್ನು ಮಾಡಿದ್ದಾರೆ
ಜಿಲ್ಲೆಯಲ್ಲಿ ಎದ್ದಿರುವ ಗಲಭೆ ವಾತಾವರಣ ತಿಳಿಯಾಗೋ ವರೆಗೂ ಅಧಿಕಾರಿಗಳಿಗೆ ರಜೆ ಇಲ್ಲ ಎಂದು ಆದೇಶವನ್ನು ಮಾಡಿದ್ದಾರೆ.ಪೊಲೀಸ್,ಶಿಕ್ಷಣ ಇಲಾಖೆ ಅಲ್ಲದೆ ಜಿಲ್ಲಾಡ ಳಿತ ಎಲ್ಲಾ ಅಧಿಕಾರಿಗಳು ಶಾಲೆಗಳಿಗೆ ತೆರಳಬೇಕು ಎಂದು ಸೂಚನೆಯನ್ನು ನೀಡಿದ್ದಾರೆ.ಯಾವುದೇ ರೀತಿ ಆತಂಕ ಪಡದೆ ಶಿಕ್ಷಣ ಶಿಕ್ಷಣ ಸಂಸ್ಥೆಗಳನ್ನ ತೆರಯುವಂತೆ ಆಡಳಿತ ಮಂಡಳಿಗೆ ಡಿಸಿ ಸೂಚನೆಯನ್ನು ನೀಡಿದ್ದಾರೆ.ಜಿಲ್ಲೆಯ ಪರಿಸ್ಥಿತಿ ತಿಳಿಗೊಳಿಸಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕಟ್ಟುನಿಟ್ಟಿನ ಆದೇಶವನ್ನು ಮಾಡಿದ್ದಾರೆ. ಇಂದಿ ನಿಂದ ಶಾಲೆ ಆರಂಭವಾಗುತಿದ್ದು ಜಿಲ್ಲಾಡಳಿತ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿದ್ದು ಇಂದಿನಿಂದ ಶಾಲೆ ಆರಂಭವಾಗುತಿದ್ದು ಜಿಲ್ಲಾಡಳಿತ ಪೊಲೀಸ್ ಇಲಾಖೆ ಗಮನ ಬರಿಸಿದೆ.