ದಾವಣಗೆರೆ –
ಹೌದು ಸರಳ ಪ್ರಶ್ನೆಗಳಿಗೂ ಮಕ್ಕಳು ಉತ್ತರಿಸದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಸರ್ಕಾರಿ ಮೋತಿ ವೀರಪ್ಪ ಶಾಲೆಯ ಶಿಕ್ಷಕನಿಗೆ ದಾವಣಗೆರೆ ಜಿಲ್ಲಾಧಿಕಾರಿ ನೋಟಿಸ್ ನೀಡಲು ಸೂಚಿಸಿದ್ದಾರೆ.ಹೌದು ಸರಳವಾದ ಪ್ರಶ್ನೆಗಳಿಗೂ ಉತ್ತರ ನೀಡದಿರುವುದು ಏಕೆ.ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಶೋಕಾಸ್ ನೋಟಿಸ್ ನೀಡಿ ಎಂದು ಡಿಡಿಪಿಐಗೆ ದಾವಣಗೆರೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಿ ದ್ದಾರೆ.ಜೊತೆಗೆ ನಾಳೆಯಿಂದ ಹೆಚ್ಚುವರಿ ತರಗತಿ ನಡೆಸಲು ಸೂಚನೆ ನೀಡಿದ್ದಾರೆ.ಹೆಚ್ಚುವರಿಯಾಗಿ ಗಣಿತ,ಇಂಗ್ಲಿಷ್ ತರಗತಿ ನಡೆಸಲು ಸೂಚನೆ ನೀಡಿದ್ದಾರೆ.
ಹಿಜಾಜ್-ಕೇಸರಿ ಸಂಘರ್ಷದ ಹಿನ್ನೆಲೆಯಲ್ಲಿ ಹೈಸ್ಕೂಲ್ ಗಳಿಗೆ ಭೇಟಿ ನೀಡಿದರು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ.ಇನ್ನೂ ಹಿಜಾಬ್ ಭಯ ದೂರ ಮಾಡಲು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಶಾಲೆಗಳಿಗೆ ಭೇಟಿ ನೀಡಿದ್ದು ಈ ವೇಳೆ ಕೆಲ ಕಡೆ ತಾವೇ ಮಕ್ಕಳಿಗೆ ಇಂಗ್ಲಿಷ್ ಪಾಠ ಕೂಡಾ ಮಾಡಿದರು.ಹೀಗೆ ಪಾಠ ಮಾಡಿ ಉತ್ತರ ಕೇಳಿದಾಗ ಮಕ್ಕಳಿಂದ ಸರಿಯಾದ ಉತ್ತರ ಬರಲಿಲ್ಲ ಹೀಗಾಗಿ ಶಿಕ್ಷಕನಿಗೆ ಶೋಕಾಸ್ ನೋಟಿಸ್ ನೀಡಲು ಸೂಚನೆ ನೀಡಿದರು.ಈ ವೇಳೆ ನಾಳೆಯಿಂದ ಇಂಗ್ಲಿಷ್ ಹಾಗೂ ಗಣಿತ ವಿಷಯ ಹೆಚ್ಚುವರಿ ಕ್ಲಾಸ್ ತೆಗೆದುಕೊಳ್ಳಲು ಸೂಚನೆ ನೀಡಿದರು.ಇಂಗ್ಲಿಷ್ ಶಿಕ್ಷಕರಿಗೆ ಶೋಕಾಸ್ ನೋಟಿಸ್ ಉತ್ತರ ನೀಡುವಂತೆ ಸ್ಥಳದಲ್ಲಿಯೇ ಇದ್ದ ಡಿಡಿಪಿಐ ತಿಪ್ಪೇಶ್ ಅವರಿಗೆ ಸೂಚನೆ ನೀಡಿದರು ಜಿಲ್ಲಾಧಿಕಾರಿ ಬೀಳಗಿ.ಜಿಲ್ಲಾಧಿಕಾರಿಗಳ ಸೂಚನೆ ಮೇಲೆ ಇಂಗ್ಲಿಷ್ ಶಿಕ್ಷಕರಿಗೆ ಶೋಕಾಸ್ ನೋಟಿಸ್ ನೀಡಲಾಗು ವುದು.ಅವರಿಂದ ಒಂದು ವಾರದಲ್ಲಿ ಉತ್ತರ ಪಡೆಯಲಾ ಗುವುದು.ಮೇಲಾಗಿ ನಾಳೆಯಿಂದ ಇಂಗ್ಲಿಷ್ ಮತ್ತು ಗಣಿತ ವಿಷಯಗಳಿಗೆ ಹೆಚ್ಚುವರಿ ಕ್ಲಾಸ್ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಡಿಡಿಪಿಐ ಜಿ.ಆರ್.ತಿಪ್ಪೇಶ್ ತಿಳಿಸಿ ದ್ದಾರೆ.