ಬೆಂಗಳೂರು –
ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಸಭೆ ಮಾಡಿದರು ಮೊದಲು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಮಾಡಿ ಪ್ರಮುಖವಾಗಿ ಇಲಾಖೆಯ ಕೆಲವೊಂದಿಷ್ಟು ವಿಚಾರಗಳ ಕುರಿತು ಚರ್ಚೆ ಯನ್ನು ಮಾಡಿದರು ನಂತರ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವರೊಂದಿಗೆ ಸಭೆಯನ್ನು ಮಾಡಿದರು ಹೊಸದಾಗಿ ಶಾಲಾ-ಕಾಲೇಜುಗಳ ಹೊಸ ಮಾನ್ಯತೆ ಹಾಗೂ ಮಾನ್ಯತೆಯ ನವೀಕರಣಕ್ಕೆ ಸಂಬಂಧಿಸಿದಂತೆ ಈ ಒಂದು ಸಭೆಯನ್ನು ಮಾಡಿದರು.

ಕಟ್ಟಡ ಮತ್ತು ಅಗ್ನಿ ಸುರಕ್ಷತೆ ಪ್ರಮಾಣಪತ್ರ ನೀಡಿಕೆ ಸರಳೀ ಕರಣ ಕುರಿತು ಶಿಕ್ಷಣ ಇಲಾಖೆ,ಲೋಕೋಪಯೋಗಿ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳ ಜೊತೆ ವಿಧಾನಸೌಧದಲ್ಲಿ ಸಭೆ ನಡೆಸಿದರು.