ವಿಜಯಪುರ –
ಪಿಕ್ನಿಕ್ ಹೊರಟಿದ್ದ ಸರ್ಕಾರಿ ಶಾಲೆಯ ಮಕ್ಕಳ ಬಸ್ ವೊಂದು ಅಪಘಾತ ಕ್ಕಿಡಾದ ಘಟನೆ ವಿಜಯಪುರ ದಲ್ಲಿ ನಡೆದಿದೆ.ಹೌದು ಶಾಲಾ ವಾಹನ ಪಲ್ಟಿಯಾಗಿ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದು 15ಕ್ಕೂ ಹೆಚ್ಚು ಮಕ್ಕಳು ಗಾಯ ಗೊಂಡ ಘಟನೆ ತಾಳಿಕೋಟಿ ಪೊಲೀಸ್ ಠಾಣೆ ವ್ಯಾಪ್ತಿಯ ಲ್ಲಿ ಸಂಭವಿಸಿದೆ.

ತಾಳಿಕೋಟೆ ತಾಲೂಕಿನ ಚೋಕಾವಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಪಿಕ್ನಿಕ್ ಹೊರಡಿದ್ದರು.ಖಾಸಗಿ ವಾಹನ ದಲ್ಲಿ ಸದರಿ ಶಾಲೆಯ 30 ಕ್ಕೂ ಹೆಚ್ಚು ಮಕ್ಕಳು ಆಲಮಟ್ಟಿ ಶಾಸ್ತ್ರೀ ಜಲಾಶಯ ಪರಿಸರದ ವೀಕ್ಷಣೆಗೆ ಪಿಕ್ನಿಕ್ ಹೊರಟಿ ದ್ದರು.

ತಾಳಿಕೋಟಿ ತಾಲೂಕಿನ ಕೂಚಬಾಳ-ಬಾವೂರ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಅಪ ಘಾತದಲ್ಲಿ ಕ್ಲೀನರ್ ದಾವಲಸಾಬ ಸಾಲವಾಡಗಿ(40) ಮೃತ ಪಟ್ಟಿದ್ದಾನೆ.15 ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿದ್ದು ಹಲವು ಮಕ್ಕಳನ್ನು ತಾಳಿಕೋಟಿ ಸರ್ಕಾರಿ ಆಸ್ಪತ್ರೆಗೆ ದಾಖ ಲಿಸಿದ್ದು.ಕೆಲವು ಮಕ್ಕಳನ್ನು ಸಮೀಪದ ತಮದಡ್ಡಿ ಪ್ರಾಥ ಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗು ತ್ತಿದೆ.ಶಾಲಾ ಪಿಕ್ನಿಕ್ ಹೋಗಲು ಸದರಿ ಶಾಲೆಯ ಮುಖ್ಯೋ ಪಾಧ್ಯಾಯರು ಶಿಕ್ಷಣ ಇಲಾಖೆಯ ಅನುಮತಿ ಪಡೆದಿರಲಿ ಲ್ಲ ಎಂಬ ಆರೋಪ ಕೇಳಿ ಬಂದಿದ್ದು ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.