ಹಾವೇರಿ –
ನೀರಾವರಿ ಯೋಜನೆ ಭೂಸ್ವಾಧೀನ ವಿರೋಧಿಸಿ ಹಾವೇರಿಯ ರಟ್ಟಿಹಳ್ಳಿಯಲ್ಲಿ ನಡೆಯುತ್ತಿರುವ ಬಿ ಡಿ ಹಿರೇಮಠ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದು ಮುಂದುವರೆದಿದೆ. ರಟ್ಟಿಹಳ್ಳಿ ಹಿರೇಕೆರೂರ ಅವಳಿ ತಾಲೂಕಿನ ಉಡಗಣಿ ತಾಳಗುಂದ ಹೊಸೂರು ನೀರಾವರಿ ಯೋಜನಗೆ ಭೂ ಸ್ವಾಧೀನ ವಿರೋಧಿಸಿ ಹಿರಿಯ ನ್ಯಾಯವಾದಿ ಬಿ ಡಿ ಹಿರೇಮಠ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಕಳೆದ 9 ದಿನಗಳಿಂದ ಹೋರಾಟವನ್ನು ಮಾಡುತ್ತಿದ್ದಾರೆ. ಇನ್ನೂ ಇವರ ಹೋರಾಟಕ್ಕೇ ಧಾರವಾಡ ಜಿಲ್ಲಾ ಜಯ ಕರ್ನಾಟಕ ಸಂಘಟನೆ ಸಾಥ್ ನೀಡಿದೆ.ಸಂಘಟನೆಯ ಜಿಲ್ಲಾಧ್ಯಕ ಸುಧೀರ ಮುಧೋಳ ನೇತ್ರತ್ವದಲ್ಲಿ ಬೆಂಬಲ ನೀಡಲಾಯಿತು.

ಸುಧೀರ ಮುಧೋಳ ನೇತ್ರತ್ವದಲ್ಲಿ 20 ಕ್ಕೂ ಹೆಚ್ಚು ಸಂಘಟನೆಯ ಮುಖಂಡರು ಕಾರ್ಯಕರ್ತರು ಧಾರವಾಡದಿಂದ ತೆರಳಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಬಿ ಡಿ ಹಿರೇಮಠರಿಗೆ ಬೆಂಬಲ ನೀಡಿದರು.

ಹೋರಾಟಕ್ಕೇ ಕುಳಿತ ಹಿರಿಯ ನ್ಯಾಯವಾದಿಗೆ ಮಾಲಾರ್ಪಣೆ ಮಾಡಿ ನಿಮ್ಮ ಹೋರಾಟಕ್ಕೇ ನಮ್ಮ ಬೆಂಬಲವಿದೆ ಎಂದು ಹೇಳಿ ಸಾಥ್ ನೀಡಿದ್ರು. ಸಂಘಟನೆಯ ಜಿಲ್ಲಾಧ್ಯಕ್ ಸುಧೀರ ಮುಧೋಳ, ಜಿಲಾನಿ ಖಾಜಿ ,ಮಂಜುನಾಥ ಸುತಗಟ್ಟಿ, ಕರಿಯಪ್ಪ ಮಾಳಗಿ , ಮಂಜುನಾಥ ಕೊಪ್ಪದ

ವಿನಾಯಕ ಜಿ ಜಿ, ಪರಶುರಾಮ ದೊಡಮನಿ,ಚಂದ್ರು ಅಂಗಡಿ ಎನ್ ಎಮ್ ಮಲ್ಲೂರ, ಪುಂಡಲೀಕ ಲಿಂಗಮೈತಿ, ಸೇರದಂತೆ ಹಲವರು ಪಾಲ್ಗೊಂಡು ಬೆಂಬಲ ನೀಡಿದರು.ಇದೇ ವೇಳೆ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ನೀಡಿದರು.ಕೂಡಲೇ ಬೇಡಿಕೆ ಈಡೇರಿಸುಂತೆ ಒತ್ತಾಯಿಸಿದ್ರು.