ಬೆಂಗಳೂರು –
ಕೇಂದ್ರದ ಮಾದರಿಯಲ್ಲಿ ರಾಜ್ಯ ಸರ್ಕಾರದ ನೌಕರರಿಗೆ ವೇತನ ಹಾಗೆ NPS ರದ್ದತಿ ಕುರಿತು ಬಜೆಟ್ ನಲ್ಲಿ ಘೋಷಣೆ ಮಾಡತಾರೆ ಎಂದು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಬಳಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಿರೀಕ್ಷೆಯಲ್ಲಿದ್ದರು ಆದರೆ ಈ ಒಂದು ನಿರೀಕ್ಷೆ ಹುಸಿಯಾಗಿದ್ದು ಕೊಟ್ಟ ಮಾತನ್ನು ಹೇಳಿದ ಮಾತನ್ನು ನೀಡಿದ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮರೆತು ಬಜೆಟ್ ನಲ್ಲಿ ರಾಜ್ಯದ ಸರ್ಕಾರಿ ನೌಕರರನ್ನು ನಿರ್ಲಕ್ಷ್ಯ ಮಾಡಿದ್ದಾರೆ
ಹೌದು ಬಜೆಟ್ ನಲ್ಲಿ ಕೊಟ್ಟ ಭರವಸೆ ಈಡೇರಿದ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ನೌಕರರು ಸಿಡಿದೆದ್ದಿದ್ದಾರೆ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಮಾತನಾಡಿ ಈಗಲೂ ನಮ್ಮ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಸಿದ್ದರಿದ್ದು ಕಾದು ನೋಡಿ ಅನಿವಾರ್ಯವಾಗಿ ಹೋರಾಟ ಮಾಡೊದಾಗಿ ಹೇಳಿದರು
ಇನ್ನೂ ಇತ್ತ ಮೇಲಿನ ವಿಡಿಯೋ ನೋಡಿದರೆ ನೌಕರರ ಯಾವ ಕೆಲಸಗಳು ಆಗುತ್ತಿಲ್ಲ ಅನ್ನೋದಕ್ಕೆ ಸಾಕ್ಷಿ ಆಗಿದೆ. ನೀವು ಕೊಟ್ಟ ಭರವಸೆಗಳು ಈಡೇರುತ್ತಿಲ್ಲ ಅಂದರೆ ಇದರ ಹಿಂದಿನ ಉದ್ದೇಶ ಏನು?.ಇಡಿ ರಾಜ್ಯದ ಎಲ್ಲಾ ನೌಕರರು ನಿಮ್ಮ ಬೆಂಬಲಕ್ಕೆ ಇದ್ದಾರೆ.ಇಷ್ಟೆಲ್ಲಾ ಅನ್ಯಾಯ ಆಗುತ್ತಿದ್ದ ರು ನೀವು ಯಾಕೆ ಹೋರಾಟಕ್ಕೆ ಕರೆ ಕೊಡಬಾರದು? ಜನಪ್ರತಿನಿಧಿಗಳು ತಮ್ಮ ವೇತನ ಹೆಚ್ಚಳ ಮಾಡೋದಕ್ಕೆ ಯಾವದೇ ಸಮಿತಿ ಇಲ್ಲ.ಆದರೆ ನೌಕರರ ವೇತನ ಹೆಚ್ಚಳ, NPS ರದ್ದು ಯಾವದೇ ಭಾರವಸೆಗಳು ಈ ಒಂದು ಬಜೆಟ್ ನಲ್ಲಿ ಬರಲಿಲ್ಲ.ಇನ್ನಾದರೂ ಸಂಘಟನೆಗಳು ಎಚ್ಛೆತ್ತುಕೊಳ್ಳ ದಿದ್ದರೆ ನಮಗೆ ಯಾವದೇ ಕೆಲಸ ಕಾರ್ಯಗಳು ಆಗುವು ದಿಲ್ಲ ಮಾನ್ಯ ನೌಕರ ಬಂಧುಗಳೇ ಈ ಬಜೆಟ್ ನೋಡಿ ಎಲ್ಲರೂ ಅರ್ಥ ಮಾಡ್ಕೋಬೇಕು ಎಂದು ಸರ್ಕಾರಿ ನೌಕರರು ಸಾಮಾಜಿಕ ಜಾಲ ತಾಣಗಳಲ್ಲಿ ಆಂದೋಲನ ಆರಂಭ ಮಾಡಿದ್ದಾರೆ