ಕಲಬುರಗಿ –
ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರೌಢ ಶಾಲಾ ವಿಭಾಗದಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಹಲವು ವರ್ಷಗಳಿಂದ ಹಿರಿಯ ಸಹ ಶಿಕ್ಷಕರು ಕಾರ್ಯನಿರ್ವಹಿಸುತ್ತಿ ದ್ದಾರೆ.ಈಗ ಪ್ರೌಢ ವಿಭಾಗದಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಸೃಷ್ಟಿಸಿಲ್ಲ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿರು ವುದರಿಂದ ಗೊಂದಲ ಉಂಟಾಗಿದ್ದು ಇದನ್ನು ಬಗೆಹರಿಸ ಬೇಕು ಎಂದು ಒತ್ತಾಯಿಸಿ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ ಅವರಿಗೆ ಮನವಿ ಸಲ್ಲಿಸಿದರು.ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಹ ಶಿಕ್ಷಕ ರಿಗೆ ಪ್ರಭಾರ ಭತ್ಯೆ ಗಳಿಕೆ ರಜೆಯನ್ನು ಕೊಡಲಾಗುತ್ತಿದೆ. ಹೊಸ ಆದೇಶದಿಂದಾಗಿ ಪ್ರಭಾರ ಭತ್ಯೆ ಗಳಿಕೆ ರಜೆ ಹಾಗೂ ಇತರೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.ಹಲವು ಬಾರಿ ಮುಖ್ಯ ಶಿಕ್ಷಕರ ಬಡ್ತಿ ಕೊಟ್ಟರೂ ಈ ಹುದ್ದೆಯು ಈ ಕಾರಣದಿಂದ ಬಹಳಷ್ಟು ದಿನಗಳಿಂದ ಖಾಲಿ ಉಳಿದಿದೆ. ಕೂಡಲೇ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪ್ರೌಢ ವಿಭಾಗದಲ್ಲಿ ಮುಖ್ಯ ಶಿಕ್ಷಕರ ಹುದ್ದೆಯನ್ನು ಸೃಜಿಸಿ ಆಡಳಿ ತಾತ್ಮಕ ಹಿತದೃಷ್ಟಿಯಿಂದ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಒಂದು ಸಮಯದಲ್ಲಿ ಸಂಘದ ಕಲಬುರಗಿ ವಿಭಾಗ ಪ್ರಮುಖ ಮಹೇಶ ಬಸರಕೋಡ,ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ,ರುದ್ರಪ್ಪ ಚಟ್ನಳ್ಳಿ, ನೆಲೋಗಿ ಪ್ರಭಾರ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗುಂಡಾಪುರ ಹಾಗೂ ಇತರರು ಇದ್ದರು.