This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಸರ್ಕಾರಿ ನೌಕರರ ಶಿಕ್ಷಕರ ಬೇಡಿಕೆ ಗಳ ಕುರಿತು ಮತ್ತೊಮ್ಮೆ ಮನವಿ ಸಲ್ಲಿಸಿ ಷಡಕ್ಷಾರಿ ಅವರಿಗೆ ಮನವಿ ಷಡಕ್ಷಾರಿ ಅವರ ಅಭಿಮಾನಿ ಬಳಗದ ಬೂದನೂರ ಮಹೇಶ್ ಮಂಡ್ಯ ದ ಬಳಗದಿಂದ ಒತ್ತಾಯ

WhatsApp Group Join Now
Telegram Group Join Now

ಬೆಂಗಳೂರು –

ಗೆ,
ಮಾನ್ಯ ಷಡಕ್ಷರಿ ರವರು
ರಾಜ್ಯಾಧ್ಯಕ್ಷರು
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ)
ಬೆಂಗಳೂರು

ಮಾನ್ಯರೇ.
ವಿಷಯ::ಸರ್ಕಾರಿ ನೌಕರರು ಹಾಗೂ ಶಿಕ್ಷಕರ ಪ್ರಮುಖ ಬೇಡಿಕೆಗಳು ಈಡೇರದಿರುವ ಬಗ್ಗೆ ತಮಗೆ ಮತ್ತೋಮ್ಮೆ ಮನವಿ ಸಲ್ಲಿಸುವ ಬಗ್ಗೆ

ಈಮೇಲಿನ ಬೇಡಿಕೆಗಳ ವಿಷಯವಾಗಿ ಹಲವಾರು ಬಾರಿ ತಮ್ಮ ಗಮನಕ್ಕೆ ಈಗಾಗಲೇ ತರಲಾಗಿತ್ತು.ತಾವು ಅದಕ್ಕೆ ಕೆಲವು ವಿಚಾರವಾಗಿ ಪತ್ರಗಳನ್ನು ಘನ ಕರ್ನಾಟಕ ಸರ್ಕಾರಕ್ಕೆ ಬರೆದಿರುತ್ತೀರಿ.

ದಿನಾಂಕ -04-03-2022ರಂದು ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ 2022-23 ನೇ ಸಾಲಿನ ಬಜೆಟ್ ನ್ನು ಮಂಡಿಸಿದ್ದಾರೆ.

ದಿನಾಂಕ-25-02-2022 ರ ಶುಕ್ರವಾರ ಬೆಳಿಗ್ಗೆ10-30 ಘಂಟೆಗೆ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಂಘದ ಪದಾಧಿಕಾರಿಗಳು ಸರ್ಕಾರಿ ನೌಕರರ ಸಂಘ(ರಿ) ಬೆಂಗಳೂರು ರವರನ್ನು ಮಾನ್ಯ ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಪೂರ್ವಭಾವಿಯಾಗಿ ವಿಧಾನಸೌಧದಲ್ಲಿ ಸಭೆಯನ್ನು ಕರೆದಿದ್ದರು.

ಅಲ್ಲಿನ ಸಭೆಯಲ್ಲಿ ತಾವು ಸರ್ಕಾರಿ ನೌಕರರ ಹಾಗೂ ಶಿಕ್ಷಕರ ಈ ಕೆಳಗಿನ ಬೇಡಿಕೆಗಳ ವಿಷಯವಾಗಿ ಮಾನ್ಯ ಮುಖ್ಯ ಮಂತ್ರಿಗಳ ಜೊತೆಯಲ್ಲಿ ಚರ್ಚೆ ನಡೆಸಿ ನೌಕರರು ಹಾಗೂ ಶಿಕ್ಷಕರಿಗೆ ಅನುಕೂಲ ಮಾಡಿಕೊಡುತ್ತೀರಿ ಎಂದು ಎಲ್ಲರೂ ನಂಬಿದ್ದೇವು.

ಸರ್ಕಾರಿ ನೌಕರರು ಹಾಗೂ ಶಿಕ್ಷಕರ ಈ ಕೆಳಗಿನ ಬೇಡಿಕೆಗಳನ್ನು ಮಾನ್ಯ ಮುಖ್ಯಮಂತ್ರಿಗಳ ಜೊತೆಯಲ್ಲಿ ಚರ್ಚಿಸಿ ಮನವಿಯನ್ನು ಸಲ್ಲಿಸಲು ತಮ್ಮಲ್ಲಿ ವಿನಂತಿಸಲಾಗಿತ್ತು

ಅದರಂತೆ ತಮ್ಮ ಮನವಿಗೆ ಸ್ಪಂದಿಸಿ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಕೆಲವು ಘೊಷಣೆ ಮಾಡುತ್ತಾರೆ ಎಂದು ಎಲ್ಲಾ ನೌಕರರು ಆಶಾಭಾವನೆ ಹೊಂದಿದ್ದೇವು.

ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಸನ್ಮಾನ್ಯ ವಿಧಾನಸಭಾ ಶಾಸಕರು(MLA ರವರು)ಹಾಗೂ ಸನ್ಮಾನ್ಯ ವಿಧಾನಪರಿ ಷತ್ತು ಶಾಸಕರು(MLC ರವರು) ಹಾಗೂ ಸನ್ಮಾನ್ಯಮಾಜಿ ಮುಖ್ಯ ಮಂತ್ರಿಗಳು ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳಿಗೆ NPSರದ್ದು ಪಡಿಸಲು ಹಾಗೂ ಕೇಂದ್ರ ಮಾದರಿ ವೇತನ ಮತ್ತು 7ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಪತ್ರಗಳನ್ನು ಘನ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯ ಮಂತ್ರಿಗಳಿಗೆ ಬರೆದಿದ್ದರು.

ತಾವು ಸರ್ಕಾರದ ಜೊತೆಯಲ್ಲಿ ನಿರಂತರ ಸಂಪರ್ಕ ಸಾದಿಸಿ ಸರ್ಕಾರಿ ನೌಕರರ ಹಾಗೂ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಯಾವಾಗಲೂ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದೀರಿ

ಈಗಾಗಲೇ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದೀರಿ.

ತಾವು ಹಾಗೂ ಕೇಂದ್ರ ಸಂಘದ ಎಲ್ಲಾ ಸದಸ್ಯರು ಈ ಸಲ ಹೆಚ್ಚಿನ ಆಸಕ್ತಿಯನ್ನು ವಹಿಸಿದರೂ ಬಜೆಟ್ ನಲ್ಲಿ ಈ ಕೆಳಗಿನ ಪ್ರಮುಖ ಬೇಡಿಕೆಗಳು ಒಂದು ಘೋಷಣೆ ಆಗಿರುವುದಿಲ್ಲ.

ತಾವು ಕಳೆದ ತಿಂಗಳು ನಡೆದ ಶಿವಮೊಗ್ಗ ಸಮ್ಮೇಳನದಲ್ಲಿ ಕೇಂದ್ರ ಮಾದರಿ ವೇತನ ಹಾಗೂ NPS ರದ್ದತಿ OPS ಜಾರಿಗೆ ವಿಷಯಗಳ ಬಗ್ಗೆ ಪ್ರಸ್ತಾಪವನ್ನು ಮಾಡಿದ್ದೀರಿ.

ಈಗ ಯಾವುದೋ ಪರಿಸ್ಥಿತಿಗಳಿಂದ ಬಜೆಟ್ ನಲ್ಲಿ ಯಾವ ಷೋಷಣೆಯಾಗಿಲ್ಲ

ಆದ್ದರಿಂದ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಗಳು ಈ ಕೆಳಗಿನ ಪಟ್ಟಿಯಲ್ಲಿ ಇರುವ ಬೇಡಿಕೆಗಳ ವಿಷಯವಾಗಿ ಗಮನಹರಿಸಿ ಷೋಷಣೆ ಮಾಡುವಂತೆ ತಾವು ಮತ್ತೋಮ್ಮೆ ಒತ್ತಾಯಿಸ ಬೇಕೇಂದು ಈಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ಕರ್ನಾಟಕ ರಾಜ್ಯ ಷಡಕ್ಷರಿ ಸರ್ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರಾದ ಬೂದನೂರು ಮಹೇಶ ಮಂಡ್ಯ ಹಾಗೂ ಬಳಗದ ಸದಸ್ಯರು ಬೇಡಿಕೆಗಳ ಪಟ್ಟಿಯನ್ನು ತಮ್ಮಲ್ಲಿ ಸಲ್ಲಿಸುತ್ತಾ ಇದ್ದೇವೆ.

ಸನ್ಮಾನ್ಯ ಮುಖ್ಯಮಂತ್ರಿಗಳು ತಮ್ಮ 2022-23ನೇ ಸಾಲಿನ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸರ್ಕಾರಿ ನೌಕರರು ಹಾಗೂ ಶಿಕ್ಷಕರ ಪರವಾಗಿ ಘೋಷಣೆ ಮಾಡ ಬೇಕಾಗಿರುವ ಪ್ರಮುಖ ಅಂಶಗಳು.
………………………………
1)NPS ರದ್ದತಿ,OPS ಜಾರಿಗೆ

ರಾಜಸ್ಥಾನ ರಾಜ್ಯವು ದಿನಾಂಕ-23-02-2022 ರಂದು ಮಂಡಿಸಿದ 2022-23 ನೇ ಸಾಲಿನ ಬಜೆಟ್ ನಲ್ಲಿ ಮಾನ್ಯ ರಾಜಸ್ಥಾನದ ಮುಖ್ಯಮಂತ್ರಿ ಗಳು NPS ನ್ನು ರದ್ದು ಪಡಿಸಿ ತನ್ನ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಈ ಮಾದರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ವು ಸಹ ಈಸಾಲಿನ ಬಜೆಟ್ ನಲ್ಲಿ NPS ನ್ನು ರದ್ದು ಪಡಿಸಿ OPS ಜಾರಿಗೆ ತರುವುದರ ಮೂಲಕ NPS ನೌಕರರ ಬಹುದಿನಗಳ ಬೇಡಿಕೆಯನ್ನು ಈಡೇರಿಸ ಬೇಕಾಗಿದೆ.

2)ಕೇಂದ್ರ ಸಮಾನ ವೇತನ

ಈಗಾಗಲೇ ರಾಜ್ಯ ಸರ್ಕಾರಿ ನೌಕರರಿಗೂ ಹಾಗೂ ಕೇಂದ್ರ ಸರ್ಕಾರಿ ನೌಕರರಿಗೂ ಹಾಗೂ ವಿವಿಧ 25 ರಾಜ್ಯದ ನೌಕರರಿಗೂ ನಮಗೂ ವೇತನ ವ್ಯತ್ಯಾಸವು ಬಹಳವಾಗಿತ್ತು.ಕೇಂದ್ರ ಮಾದರಿ ವೇತನವನ್ನು ಜಾರಿ ಮಾಡುವುದರ ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನ ವ್ಯತ್ಯಾಸವನ್ನು ಕರ್ನಾಟಕ ರಾಜ್ಯ ಸರ್ಕಾರವು ಸರಿಪಡಿಸಬೇಕಾಗಿದೆ

3)ಏಳನೇ ವೇತನ ಆಯೋಗ ಜಾರಿಗೆ

ಈಗಾಗಲೇ ಪೂರ್ಣಪ್ರಮಾಣದಲ್ಲಿ ಕೇಂದ್ರ ಸರಕಾರದ ನೌಕರರು 7ನೇ ವೇತನ ಆಯೋಗ ಅನುಸಾರ ವೇತನ ಪಡೆಯುತ್ತಿರುವ ಕಾರಣ ರಾಜ್ಯ ಸರ್ಕಾರಿ ನೌಕರರಿಗೂ 7ನೇ ವೇತನ ಆಯೋಗ ಜಾರಿಗೆ ತರುವುದು.

4)ಆರೋಗ್ಯ ಸಿರಿ ಅಥವಾ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ(KASS) ತಕ್ಷಣ ಜಾರಿಗೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗಾಗಿ ಕಳೆದ ಸಾಲಿನ ಬಜೆಟ್ ನಲ್ಲಿ ಘೋಷಣೆಯಾಗಿ ಅದರಂತೆ ಸರ್ಕಾರ ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ಚಿಕಿತ್ಸೆಯ ಅವಶ್ಯಕತೆಯನ್ನು ಅರಿತು ದಿನಾಂಕ-17-08-2021 ರಂದು ಸುವರ್ಣ ಆರೋಗ್ಯ ಟ್ರಸ್ಟ ಬೆಂಗಳೂರು ರವರಿಗೆ ಇದರ ಸಂಪೂರ್ಣ ವರದಿಯನ್ನು ಸಲ್ಲಿಸಲು ತಿಳಿಸಲಾಗಿತ್ತು ಅದರಂತೆ ಸುವರ್ಣ ಆರೋಗ್ಯ ಟ್ರಸ್ಟ ಬೆಂಗಳೂರು ನವರು ದಿನಾಂಕ -27-01-2022 ರಂದು ಕರ್ನಾಟಕ ಸರ್ಕಾರಕ್ಕೆ ಸುದಿರ್ಘ ವರದಿಯನ್ನು ಸಲ್ಲಿಸಿರುತ್ತಾರೆ.ಆದರೆ ಇದುವ ರೆಗೂ ಆದೇಶ ವಾಗಿರುವುದಿಲ್ಲ.ಬೇಗ ಆದೇಶ ಮಾಡಿಸು ವುದು.

5)ಒಂದು ಸಲ ಬಯಸಿದ ಜಿಲ್ಲೆ ಅಥವಾ ತಾಲ್ಲೂಕು ಗೆ ಶಿಕ್ಷಕರ ವರ್ಗಾವಣೆ ಮಾಡಿಸುವುದು‌

(ಪಶ್ಚಿಮಬಂಗಾಳ ಮಾದರಿ)
ಈಗಾಗಲೇ ಜನವರಿ 2022ರಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ(ರಿ)ಬೆಂಗಳೂರು ವತಿಯಿಂದ ಸರಕಾರಕ್ಕೆ ನಿಖರವಾದ ಮಾಹಿತಿಯನ್ನು ಒದಗಿಸಿ ಪತ್ರಗಳನ್ನು ಬರೆಯಲಾಗಿದೆ.ಸರ್ಕಾರ ಮಟ್ಟದಲ್ಲಿ ಆದೇಶ ಮಾಡಿಸುವುದು

ತಾವು ಬಜೆಟ್ ಮಂಡನೆ ನಂತರ ಮಾಜಿ ಮುಖ್ಯ ಮಂತ್ರಿಗಳಾದ ಸನ್ಮಾನ್ಯ BS ಯಡಿಯೂರಪ್ಪನವರ ಜೊತೆಯಲ್ಲಿ ಚರ್ಚೆ ಮಾಡಿದ್ದೀರಿ.ಸನ್ಮಾನ್ಯರು ಪತ್ರಿಕಾಗೋಷ್ಟಿಯಲ್ಲಿ ಸರ್ಕಾರಿ ನೌಕರರಿಗೆ ಕೇಂದ್ರಮಾದರಿ ವೇತನ ಕೊಡಿಸುವ ಭರವಸೆ ನೀಡಿರುತ್ತಾರೆ.

ನಂತರ 4 ಘಂಟೆಯ ವೇಳೆಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿರವರು ಪತ್ರಿಕಾಗೋಷ್ಟಿಯಲ್ಲಿ ಇದೇ ವರ್ಷ ಎಲ್ಲಾ ನೌಕರರಿಗೂ 7ನೇ ವೇತನ ಆಯೋಗ ಪ್ರಕಾರ ಕೇಂದ್ರ ಮಾದರಿ ವೇತನ ಜಾರಿಮಾಡುತ್ತೇವೆ ಎಂದು ತಿಳಿಸಿರುತ್ತಾರೆ

ತಾವು ದಿನಾಂಕ-05-03-2022 ರಂದು ಶಿಕಾರಿಪುರದ ಸಮ್ಮೇಳನದಲ್ಲಿ ನಿಕಟಪೂರ್ವ ಮುಖ್ಯ ಮಂತ್ರಿಗಳಾದ ಸನ್ಮಾನ್ಯಶ್ರೀBS ಯಡಿಯೂರಪ್ಪನವರ ಜೊತೆಯಲ್ಲಿ ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿರವರ ಜೊತೆಯಲ್ಲಿ ಚರ್ಚೆ ನಡೆಸಿ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸರ್ಕಾರಿ ನೌಕರರಿ 7ನೇ ವೇತನ ಆಯೋಗ ಪ್ರಕಾರ ಕೇಂದ್ರ ಮಾದರಿ ವೇತನವನ್ನು ಘೋಷಿಸುವಂತೆ ಒತ್ತಾಯವನ್ನು ಮಾಡಿದ್ದೀರಿ.

ಈ ರೀತಿಯಲ್ಲಿಯೇ ತಾವು ಸರ್ಕಾರದ ಜೊತೆಯಲ್ಲಿ ನಿರಂತರ ಸಂಪರ್ಕ ಸಾದಿಸಿ ನೌಕರರ ಹಾಗೂ ಶಿಕ್ಷಕರ ಸಮಸ್ಯೆಗಳ ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ.

ನಂತರ ತಾವು ಪತ್ರಿಕಾಗೋಷ್ಟಿ ನಡೆಸಿ ತಾವು ನಡೆಸಿದ ಎಲ್ಲಾ ಪ್ರಯತ್ನವನ್ನು ಕೇಂದ್ರ ಮಾದರಿ ವೇತನ ಘೋಷಣೆ ಮಾಡಿಸುವ ಸ್ವಷ್ಠ ಭರವಸೆ ನೀಡಿದ್ದೀರಿ.ಆ ಭರವಸೆ ಈಡೇರುತ್ತದೆ ಎಂದು ಎಲ್ಲಾ ನೌಕರರು ನಂಬಿದ್ದೇವೆ

ಇಂದ
ತಮಗೆ ಸರ್ಕಾರಿ ನೌಕರರು ಹಾಗೂ ಶಿಕ್ಷಕರ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸುತ್ತಿರುವ

ಮಾನ್ಯ ಷಡಕ್ಷರಿ ರವರು ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಬೆಂಗಳೂರು ರವರ

ಕರ್ನಾಟಕ ರಾಜ್ಯ ಷಡಕ್ಷರಿ ಸರ್ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರು ಹಾಗೂ ಸದಸ್ಯರು??????????

1)ಬೂದನೂರು ಮಹೇಶ ಮಂಡ್ಯ

2)ಪ್ರಕಾಶ್ ಮಡ್ಲೂರ ಶಿವಮೊಗ್ಗ

3)G ರಂಗಸ್ವಾಮಿ ಮಧುಗಿರಿ

4)ಅರುಣ್ ಹುಡೇದ್ ಗೌಡ್ರು ಶಿಗ್ಗಾವಿ

5)ಮಹಾಂತ ಗೌಡ ಪಾಟೀಲ್ ಕಲಬುರುಗಿ

6)ಸತಿಶ್ ಜವರೇಗೌಡ ಮೈಸೂರು

7)JB ಮಂಜುನಾಥ್ ಬೂಕನಕೆರೆ KR ಪೇಟೆ

8)ಚನ್ನಬಸವ ಮಂತ್ರಾಲಯ

9)ವೀರೇಶ್ ಬಾದಾಮಿ ಬಾಗಲಕೋಟೆ

10)ಕಲ್ಲೇಶ್ ಚಿಕ್ಕಮಗಳೂರು

11)ಚೇತನ್ ರಾಮನಗರ

12)ಅನಿಲ್ ಹಂಜಿ ಚಿಕ್ಕೋಡಿ

13)ರಾಜಶೇಖರ್ ಗೌರಿಬಿದನೂರು

14)ಸಿದ್ದಲಿಂಗಮೂರ್ತಿ ತುಮಕೂರು

15)ಮಂಜುನಾಥ ಕುಶಾಲನಗರ

16)ಕೇಶವಮೂರ್ತಿ ಸಕಲೇಶಪುರ

17)GF ಗುಡ್ಡೇನಕಟ್ಟಿ ಧಾರವಾಡ

18)ಶರಣು ಸಿಂದಗಿ ಶಹಾಪೂರ ಯಾದಗಿರಿ

19ನಾಗರಾಜ್ ಹುಗ್ಗಿ ಹುಬ್ಬಳ್ಳಿ-ಧಾರವಾಡ

20)ಶಂಕರ್ KGF ಕೋಲಾರ

21)ಸಂತೋಷಕುಮಾರ್ ಕೊಡಗು

22)ರಮೇಶ ರ ಮುಂಜಣ್ಣಿ ಇಂಡಿ ವಿಜಯಪುರ

23)ಆನಂದ ಕಾಜ್ ಘರ್ ಯಾದಗಿರಿ

24)ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ)

25)ರವಿಕುಮಾರ್ ಗೌರಿಬಿದನೂರು

26)ಚೌಡ್ಲಪುರ ಸೂರಿ ಬಳ್ಳಾರಿ

27)ಸತೀಶ ಚಿತ್ರದುರ್ಗ

28)ನಾಗಲಿಂಗಪ್ಪ ಗುಡಿಬಂಡೆ

29)ನಾಗರಾಜ್ ಬಾಗೇಪಲ್ಲಿ

30)ಭರತ್ ಕುಮಾರ್ ರಾಯಚೂರು

31)ರಘುHM ರಾಯಚೂರು

32)ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ

33)CCEನರಸಿಂಹಮೂರ್ತಿ ಚಿತ್ರದುರ್ಗ

34)ಜನಾರ್ದನ್ ರೆಡ್ಡಿ ಬಾಗೇಪಲ್ಲಿ

35)ಸಿದ್ದೇಶ್ವರ ನ್ಯಾಮತಿ ದಾವಣಗೆರೆ

36)ಗೋವಿಂದಟೀಳೆ ಬೀದರ್

37)NR ಬಾರಾಕೇರ್ ಕುಂದಗೋಳ

38)ಪರಪ್ಪ ಕರೀಗರ್ ಸಿಂದನೂರು

39)ಅಮರೇಶ ಗೋಣವರ್ ದೇವದುರ್ಗ ರಾಯಚೂರು

40)ದೇವೇಂದ್ರಪ್ಪ ಮಾಸ್ತೂರು ಯಾದಗಿರಿ

41)ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ

41)ಶಿವಕುಮಾರ್ ಅಂಗಡಿ ರಾಮದುರ್ಗ ಬೆಳಗಾವಿ

42)ಶಂಕರ್ ಕಂಡೇಕರ್ ತಿಕೋಟಾ ವಿಜಯಪುರ

43)ಹೇಮಂತ್ ಚಿನ್ನು ಹಾಸನ

44)ವಿಷವಭ ಮಹಾಜನ್ ಬೆಳಗಾವಿ

45)MVಗಬ್ಬೂರ್ ಬಸವನಬಾಗೇವಾಡಿ ವಿಜಯಪುರ

46)ನಿಂಗಪ್ಪ ಕಬ್ಬೂರ್ ಸವದತ್ತಿ ಬೆಳಗಾವಿ

47)ಚಿತ್ರ ಸೆಲ್ವರಾಜ್ ಭದ್ರಾವತಿ ಶಿವಮೊಗ್ಗ

48)ಪರಶುರಾಮ ಗುತ್ತಲ್ ಶಾಹಬಾದ್ ಕಲುಬುರಗಿ

49)ಈರಣ್ಣ ಹೊಸಹಟ್ಟಿ ವಿಜಯಪುರ ಗ್ರಾಮೀಣ

50)ಮಾಲೇತೇಶ್ ಬಬ್ಬಜಿ ಚಿತ್ತಾಪುರ ಕಲುಬುರಗಿ

51)ಶ್ರೀಕಾಂತ್ ಕಲ್ಯಾಣ್ ಶೆಟ್ಟಿ ಚಡಚಣ ವಿಜಯಪುರ

52)ಆನಂದ ಸವದಿ ಅಥಣಿ ಚಿಕ್ಕೋಡಿ

53)ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ

54)YMಮಂಜುನಾಥ್ ಯಳಂದೂರು ಚಾಮರಾಜನಗರ

55)ಶಿವಪ್ಪ ಕನಕಗಿರಿ ಕೊಪ್ಪಳ

56)ಕೆಂಪೇಗೌಡ ಪಾಂಡವಪುರ

57)HC ಕಂಠಿ ಲಿಂಗಸುಗೂರು ರಾಯಚೂರು

58)ಗಿರಿರಾಜ್ ಹೊಸಪೇಟೆ ವಿಜಯನಗರ

59)MFಸಜ್ಜನ್ ರವರು ಶಿರಹಟ್ಟಿ ಗದಗ

60)ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ

61)ಚಂದ್ರಮೌಳಿ ಹೊನ್ನಾವರ ನಾಗಮಂಗಲ

62)ಕೆಸಿ.ನಂಜುಂಡಪ್ಪ ರಟ್ಚಹಳ್ಳಿ ಹಾವೇರಿ

63)ಮಲ್ಲಿಕಾರ್ಜುನ್ ಮೇಲ್ವಿ ಗೋಟಾಳ್ ಬಸವಕಲ್ಯಾಣ ಬೀದರ್

64)ನಾಗೇಶಗೌಡ ಸಿರಾ ತುಮಕೂರು

65)ಮಸ್ತಾನ್ ವಲಿ ಗುಟ್ಚಹಳ್ಳಿ ಚಿಂತಾಮಣಿ

66)ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು

67)BS ಮಂಜುನಾಥ
HDಕೋಟೆ

68)HA ಹನುಮಂತರಾಜು ನಂಜನಗೂಡು

69)ಶ್ರೀ ಶ್ರೀಶೈಲ.ಸಂ.ಸೊಲಾಪೂರ ತ್ರಿಕೂಟ ವಿಜಯಪುರ

70)IH ದಾಸರ್ ಮುರಡಿ ಮುಂಡರಗಿ ಗದಗ

71)GN ತಿಪ್ಪೇಸ್ವಾಮಿ ಮೊಳಕಾಲ್ಮೂರು ಚಿತ್ರದುರ್ಗ

72)ಚಂದ್ರಶೇಖರ ತಿಗಡಿ ಧಾರವಾಡ ಗ್ರಾಮೀಣ

73)ಹೇಮಣ್ಣ ಕವಲೂರು ಕೊಪ್ಪಳ

74)ಕರಿಬಸಪ್ಪದೊಡ್ಡಜಾರ್ ಕಂಪ್ಲಿ ಬಳ್ಳಾರಿ

75)ನಿಂಗಪ್ಪ ಕರಿಯಪ್ಪ ಸುನಾಗರ್ ಲಕ್ಷ್ಮೇಶರ ಗದಗ

76)MM ಮಂಜು ಸಂತೇಬಾಚನಹಳ್ಳಿ KR ಪೇಟೆ

77)DG ಸಜ್ಜನ್ ಮುದಗಲ್ಲು ಲಿಂಗಸುಗೂರು ರಾಯಚೂರು

78)ಮಹೇಶ ಹೊಂಗಲ ಬೈಲೂರ ಚನ್ನಮ್ಮನ ಕಿತ್ತೂರು ಬೆಳಗಾವಿ

79)ನಾಗನಗೌಡ ಪಾಟೀಲ್ ಹಾವೇರಿ

80) ವಿಷ್ಣು ಅರಿಗೆ ರಾಯಬಾಗ ಬೆಳಗಾವಿ

81)RM ಹೋಲ್ತಿಕೋಟಿ ಕಲಘಟಗಿ ಧಾರವಾಡ

82)ಸಂತೋಷ ಕುಲಕರ್ಣಿ ತ್ರಿಕೂಟ ವಿಜಯಪುರ

83)ಸಿದ್ದೇಶ್ವರಪ್ಪ ಪಾವಗಡ

84)ಪಕ್ಕೀರ್ ಗೌಡ ತಾಳಿಗೇರಿ ಸಿಂಧನೂರು ರಾಯಚೂರು

85)ಬಂಗಾರಪ್ಪM ತಲ್ಲೂರು ಸೊರಬ
????????
*ಹಾಗೂ ಕರ್ನಾಟಕ ರಾಜ್ಯ *ಷಡಕ್ಷರಿ ಸರ್ ಅಭಿಮಾನಿಗಳ ಬಳಗ ಬೆಂಗಳೂರು*


WhatsApp Group Join Now
Telegram Group Join Now
Suddi Sante Desk