ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರಿಗೆ ಈಗಾಗಲೇ ಜಾರಿಯಾಗಿರುವ ಹೊಸ ಪಿಂಚಣಿ ಯೋಜನೆ ಕೈಬಿಡುವಂತೆ ಸರ್ಕಾರಕ್ಕೆ ನೌಕರರು ಒತ್ತಡ ಹಾಕುತ್ತಿದ್ದಾರೆ.ಈ ಒಂದು ವಿಚಾರ ಕುರಿ ತಂತೆ ರಾಜ್ಯ ಸರ್ಕಾರಿ ನೌಕರರು ಕೂಡಾ ಹಲವಾರು ಬಾರಿ ಹೋರಾಟಗಳನ್ನು ಮಾಡಿ ರದ್ದು ಮಾಡುವಂತೆ ಒತ್ತಾಯ ಒತ್ತಡವನ್ನು ಹಾಕುತ್ತಿದ್ದು ಇದೇಲ್ಲದರ ನಡುವೆ ಈ ಬಾರಿಯ ಬಜೆಟ್ ನಲ್ಲಿಯೇ ಇದು ಜಾರಿಗೆ ಬಂದೇ ಬರು ತ್ತದೆ ಎಂಬ ನಿರೀಕ್ಷೆಯಲ್ಲಿದ್ದರು ಆದರೂ ಕೂಡಾ ಯಾವುದೇ ಭರವಸೆ ಷೋಷಣೆ ಸಿಗಲಿಲ್ಲ ಹೀಗಾಗಿ ಈ ಒಂದು ವಿಚಾರ ಕುರಿತಂತೆ ಇಂದು ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಸದಸ್ಯ ಡಾ.ಅಜಯ್ ಧರ್ಮ ಸಿಂಗ್ ಅವರು ಚುಕ್ಕೆ ಗುರಿತಿಲ್ಲದ ಪ್ರಶ್ನೆ ಕುರಿತಂತೆ ಮಾತ ನಾಡಿದ ಅವರು ರಾಜ್ಯ ಸರ್ಕಾರದ ಸೇವೆಗೆ 2006ರ ನಂತ್ರ ನೇಮಕವಾದ ನೌಕರರುಗಳಿಗೆ ಹೊಸ ಪಿಂಚಣಿ ವ್ಯವಸ್ಥೆ ಅಳವಡಿಸಲಾಗಿರುವುದು ಸರ್ಕಾರದ ಗಮನಕ್ಕೆ ಬಂದಿದ್ಯಾ ಎಂದು ಪ್ರಶ್ನಿಸಿದರು.ಈ ಪ್ರಶ್ನೆಗೆ ಉತ್ತಿರಿಸಿದ ಸಿಎಂ ಬಸವ ರಾಜ ಬೊಮ್ಮಾಯಿಯವರು ಹೌದು ಬಂದಿದೆ.ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸೂಕ್ತ ಬದಲಾವಣೆ ಮಾರ್ಪಾಡು ಮಾಡಲು ಸರ್ಕಾರ ದಿನಾಂಕ 11-12-2018ರಲ್ಲಿ ಅಧಿಕಾರಿ ಗಳ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು
ಇನ್ನೂ ಯಾವ ಕಾಲ ಮಿತಿಯಲ್ಲಿ ಈ ಕುರಿತು ಕ್ರಮ ಕೈಗೊಂಡು ಈ ನೌಕರುಗಳಿಗೆ ಹೊಸ ಪಿಂಚಣಿ ವ್ಯವಸ್ಥೆ ಬದಲಾಗಿ ಹಳೆ ಪಿಂಚಣಿ ವ್ಯವಸ್ಥೆಗೊಳಪಡಿಸಿ, ನ್ಯಾಯ ವನ್ನು ಒದಗಿಸಲಾಗುವುದು ಎಂದು ಮರು ಪ್ರಶ್ನಿಸಿದಾಗ ಅಧಿಕಾರಿಗಳ ಸಮಿತಿಯು ವರದಿಯನ್ನು ನಿರೀಕ್ಷಿಸಲಾಗಿದೆ ಎಂದಿದ್ದಾರೆ.
ಮಂಜುನಾಥ ಸರ್ವಿ ಹಿರಿಯ ವರದಿಗಾರರು ಸುದ್ದಿ ಸಂತೆ ನ್ಯೂಸ್ ಬೆಂಗಳೂರು ಡೆಸ್ಕ್