ಕಾರವಾರ –
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಾದ್ಯಂತ 20 ಸಾವಿರ ಶಾಲೆ ಗಳಲ್ಲಿ ಪೂರ್ವ ಪ್ರಾಥಮಿಕ ಅರ್ಲಿ ಚೈಲ್ಡ್ ಎಜುಕೇಷನ್ ಸಿಸ್ಟಮ್- ನರ್ಸರಿಯಿಂದ ಎರಡನೇ ತರಗತಿ ಶಿಕ್ಷಣ ನೀಡ ಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ತಿಳಿಸಿದ್ದಾರೆ.

ಕಾರವಾರ ದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಬುರಗಿಯಲ್ಲಿ ಶೀಘ್ರವೇ ಚಾಲನೆ ನೀಡಲಿ ದ್ದಾರೆ.ಜನ ಸಾಮಾನ್ಯರ ಮಕ್ಕಳಿಗೆ ಯಾವುದೇ ಹೊರೆಯಿ ಲ್ಲದ ಶಿಕ್ಷಣ ನೀಡಬೇಕು ಎಂಬುದು ಉದ್ದೇಶವಾಗಿದೆ ಎಂದು ಹೇಳಿದರು.