ಬೆಂಗಳೂರು –
ಸ್ವಂತ ಜಿಲ್ಲೆಗೆ ವರ್ಗಾವಣೆ ಇಪ್ಪತ್ತೈದು ವರ್ಗಾವಣೆ ನಿಯಮ ರದ್ದು ಏಪ್ರಿಲ್ ಹತ್ತು ರೊಳಗಾಗಿ ಜಾರಿಗೊಳಿ ಸಬೇಕೆಂದು ರಾಜ್ಯ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಗಡುವು ನೀಡಿದ್ದಾರೆ
ಶಿಕ್ಷಕರು ಸಾಕಷ್ಟು ತೊಂದರೆಯಲ್ಲಿದ್ದು ಮಾನಸಿ ಕವಾಗಿ ದೈಹಿಕವಾಗಿ ನೆಮ್ಮದಿ ಇಲ್ಲದಾಗಿದೆ ಇತ್ತೀಚೆಗೆ ನಡೆದ ವರ್ಗಾವಣೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಶಿಕ್ಷಕರು ಮಾತ್ರ ವರ್ಗಾವಣೆಗೊಂಡಿದ್ದು ಶೇಕಡಾ 95 ರಷ್ಟು ವಿಧವೆ ಅಂಗವಿಕಲ ವೈದ್ಯಕೀಯ ಪತಿ ಪತ್ನಿ ಪ್ರಕರಣ ಹೀಗೆ ಸಾಕಷ್ಟು ಸೇವೆ ಸಲ್ಲಿಸಿದ ಶಿಕ್ಷಕರಿಗೂ ವರ್ಗಾವಣೆ ಇಲ್ಲದೆ ವಂಚಿತರಾಗಿದ್ದಾರೆ ನೊಂದಿದ್ದಾರೆ ಇವರಿಗೆಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಆಗಬೇಕು
ಸರ್ಕಾರ ಅಧಿಕಾರಿಗಳು ಶಿಕ್ಷಣ ಸಚಿವರು ತಕ್ಷಣ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿ ಏಪ್ರಿಲ್ ಹತ್ತು ರೊಳಗೆ ಶೇಕಡಾ 25 ನಿಯಮ ರದ್ದು ಹಾಗೂ ಸ್ವಂತ ಜಿಲ್ಲೆಗೆ ಒಮ್ಮೆ ವರ್ಗಾವಣೆ ಸುಗ್ರೀವಾಜ್ಞೆ ಹೊರಡಿಸಿ ಜಾರಿ ಗೊಳಿಸಬೇಕು ವಿಳಂಬ ನೀತಿ ಅನುಸರಿಸಿದ್ದರೆ ಶಿಕ್ಷಕರು ಎಪ್ರೀಲ್ 10 ನಂತರ ಸಂಘಟಿತರಾಗಿ ಹೋರಾಟಕ್ಕೆ ಇಳಿಯುತ್ತಾರೆ ಎಂದು ಗ್ರಾಮೀಣ ಪ್ರೌಡ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು ಪವಾಡೆಪ್ಪ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ