ಬೆಂಗಳೂರು –
ಶಾಲೆಯಲ್ಲೇ ಆರು ವರ್ಷದ ಬಾಲಕಿ ಮೇಲೆ ರೇಪ್ ಮಾಡಿದ ಬೆಂಗಳೂರಿನ ಇಂದಿರಾನಗರದ ಶಿಕ್ಷಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆಯನ್ನು ನ್ಯಾಯಾಲಯ ನೀಡಿದೆ ಹೌದು ಘಟನೆ ನಡೆದ ನಂತರ ಬಾಲಕಿಯು ತಾಯಿಯ ಬಳಿ ಘಟನೆ ಕುರಿತಂತೆ ಜೀವನ್ ಬಿಮಾ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.ದೂರಿನ ಮೇರೆಗೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಹಾಗೂ ಪೋಕ್ಸೋ ಕಾಯಿದೆ ಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಶಿಕ್ಷಕನನ್ನು 2014ರ ಅಕ್ಟೋಬರ್ 30 ರಂದು ಬಂಧಿಸಿದ್ದರು
ಶಾಲೆ ಆವರಣದಲ್ಲೇ 6 ವರ್ಷದ ಬಾಲಕಿ ಮೇಲೆ ಅತ್ಯಾ ಚಾರ ಎಸಗಿದ ಆರೋಪದ ಸಾಬೀತಾದ ಹಿನ್ನೆಲೆಯಲ್ಲಿ ಇಂದಿರಾನಗರದ ಖಾಸಗಿ ಶಾಲೆಯೊಂದರ ಶಿಕ್ಷಕನಿಗೆ ಬೆಂಗಳೂರು ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಇಂದಿರಾನಗರದ ಖಾಸಗಿ ಶಾಲೆಯೊಂ ದರಲ್ಲಿ ಹಿಂದಿ ಬೋಧಿಸುತ್ತಿದ್ದ ಹಳೆ ತಿಪ್ಪಸಂದ್ರ ನಿವಾಸಿ ಜಯಶಂಕರ್ (46) ಎಂಬ ಶಿಕ್ಷಕನಿಗೆ ಈ ಶಿಕ್ಷೆ ವಿಧಿಸಲಾ ಗಿದೆ.ಈತನ ವಿರುದ್ಧ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿದೆ.2014ರ ಅಕ್ಟೋಬರ್ 28 ರಂದು ಶಾಲೆಯಿಂದ ಮನೆಗೆ ಮರಳಿದ್ದ ಬಾಲಕಿ ತನ್ನ ಖಾಸಗಿ ಭಾಗಗಳಲ್ಲಿ ನೋವಾಗುತ್ತಿರುವ ಬಗ್ಗೆ ತನ್ನ ತಾಯಿಗೆ ಹೇಳಿಕೊಂಡಿದ್ದಳು.ಮಗುವನ್ನು ಆಸ್ಪತ್ರೆಗೆ ಕರೆ ದೊಯ್ದು ತಪಾಸಣೆ ನಡೆಸಿದಾಗ ಅತ್ಯಾಚಾರ ಎಸಗಿರು ವುದು ದೃಢಪಟ್ಟಿತ್ತು.ಘಟನೆ ನಡೆದ ಮರುದಿನ ಮಗುವಿನ ತಾಯಿ ಶಾಲೆಗೆ ತೆರಳಿ,ಈ ಬಗ್ಗೆ ಶಿಕ್ಷಕರಿಂದ ವಿವರಣೆ ಕೇಳಿ ದ್ದರು.ಆದರೆ ಶಾಲಾ ಸಿಬ್ಬಂದಿ ಸೂಕ್ತವಾಗಿ ಪ್ರತಿಕ್ರಿಯಿ ಸಿರಲಿಲ್ಲ.ಬಳಿಕ ತಾಯಿ ಘಟನೆ ಕುರಿತಂತೆ ಜೀವನ್ ಬಿಮಾ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.ದೂರಿನ ಮೇರೆಗೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಹಾಗೂ ಪೋಕ್ಸೋ ಕಾಯಿದೆಯಡಿ ಪ್ರಕರಣ (Sec 376 of IPC relates to rape and Sections 4 and 6 of POCSO Act) ದಾಖಲಿಸಿಕೊಂಡ ಪೊಲೀಸರು ಆರೋಪಿ ಶಿಕ್ಷಕನನ್ನು 2014ರ ಅಕ್ಟೋಬರ್ 30 ರಂದು ಬಂಧಿಸಿ ದ್ದರು.ವಿಚಾರಣೆ ವೇಳೆ ಆರೋಪಿ ಶಿಕ್ಷಕ (Jayashankar) ಬಾಲಕಿಯನ್ನು ಮಧ್ಯಾಹ್ನದ ಊಟದ ವೇಳೆ ಶಾಲೆಯ ಶೌಚಾಲಯಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದು ಬೆಳಕಿಗೆ ಬಂದಿತ್ತು.ಅಭಿಯೋಜನೆ ಪರ ಸರ್ಕಾರಿ ಅಭಿಯೋಜಕ ಕೆವಿ ಅಶ್ಚತ್ಥನಾರಾಯಣ ವಾದ ಮಂಡಿಸಿ ದ್ದರು.