ಬೆಂಗಳೂರು –
15 ಸಾವಿರ ಶಾಲಾ ಶಿಕ್ಷಕರ ನೇಮಕಕ್ಕೆ ಅರ್ಜಿ ಸಲ್ಲಿಸಲು ಆರಂಭಗೊಂಡಿದ್ದು ಇನ್ನೂ ಮೊದಲ ದಿನವೇ 5 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ.ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮಾ.23ರಂದು ತಡರಾತ್ರಿಯಿಂದ ಚಾಲನೆ ಸಿಕ್ಕಿದೆ.ಮೊದಲ ದಿನವೇ 5 ಸಾವಿರ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.ಇನ್ನೂ ಬಹುತೇಕ ಅಭ್ಯರ್ಥಿಗಳು ತಂತ್ರಾಂಶ ಭೇಟಿ ನೀಡಿ ಅಗತ್ಯ ದಾಖಲೆ ಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದು ಅರ್ಜಿ ಶುಲ್ಕ ಪಾವತಿಸುವ ಪ್ರಮಾಣ ತುಂಬಾ ಕಡಿಮೆ ಇದೆ.ಇನ್ನೂ ಅರ್ಜಿ ಸಲ್ಲಿಕೆಗೆ ಏಪ್ರಿಲ್ 22ರವರೆಗೆ ಅವಕಾಶ ಕಲ್ಪಿಸಿದೆ.
ಇದರ ಜೊತೆಗೆ ಶಿಕ್ಷಣ ಇಲಾಖೆಯು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.ಅಭ್ಯರ್ಥಿಗಳು http://www.schooleducation.kar.nic.in/ ಭೇಟಿ ನೀಡಿ ಪತ್ರಿಕೆ-1,2,3 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.ಇದರಿಂದಾಗಿ ಅಭ್ಯರ್ಥಿಗಳು ಪರೀಕ್ಷೆಗೆ ಅಭ್ಯಾಸ ನಡೆಸಲು ಅನುಕೂಲ ವಾಗಲಿದೆ.