ಚಿಕ್ಕಬಳ್ಳಾಪುರ –
ಹೌದು ಮನೆಯಿಂದ ನಾಪತ್ತೆಯಾಗಿದ್ದ ಸಹೋದರಿ ಯರಿಬ್ಬರೂ ಶವವಾಗಿ ಪತ್ತೆಯಾದ ಘಟನೆ ಚಿಕ್ಕಬಳ್ಳಾಪುರ ದಲ್ಲಿ ನಡೆದಿದೆ.ಜಿಲ್ಲೆಯ ಅಗಲಗುರ್ಕಿ ಗ್ರಾಮದ ಅಶ್ವಿನಿ (16) ಮತ್ತು ನಿಶ್ಚಿತಾ(14) ಮೃತ ಅಕ್ಕ-ತಂಗಿಯರಾಗಿದ್ದಾರೆ. ಅಕ್ಕ ಅಶ್ವಿನಿ ಗ್ರಾಮದ ಯುವಕನೊಬ್ಬನನ್ನು ಪ್ರೀತಿಸುತ್ತಿ ದ್ದಳು.ಈ ವಿಚಾರ ಗೊತ್ತಾಗಿ ಮಗಳಿಗೆ ಅಪ್ಪ-ಅಮ್ಮ ಬೈದು ಬುದ್ಧಿ ಹೇಳಿದ್ದರು.ಮನನೊಂದ ಅಶ್ವಿನಿ,ತನ್ನ ತಂಗಿಯನ್ನೂ ಕರೆದುಕೊಂಡು ಮನೆಯಿಂದ ನಿನ್ನೆ ಸಂಜೆ ಹೊರ ಹೋಗಿದ್ದ ಳು.ರಾತ್ರಿ ಎಷ್ಟೊತ್ತಾದರೂ ಅಕ್ಕ-ತಂಗಿ ಇಬ್ಬರೂ ಮನೆಗೆ ವಾಪಸ್ ಬಂದಿರಲಿಲ್ಲ.ಮನೆಯವರು ಊರೆಲ್ಲಾ ಹುಡುಕಾ ಡಿದರೂ ಸುಳಿವು ಸಿಕ್ಕಿರಲಿಲ್ಲ.

ಭಾನುವಾರ ಮಧ್ಯಾಹ್ನ ಚಿಕ್ಕಬಳ್ಳಾಪುರ ನಗರದ ಕಂದ ವಾರ ಕೆರೆಯಲ್ಲಿ ಅಕ್ಕ-ತಂಗಿ ಇಬ್ಬರೂ ಶವವಾಗಿ ಪತ್ತೆಯಾ ಗಿದ್ದಾರೆ.ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.ಅಯ್ಯೋ ಮಗಳೇ ಇದೆಂಥಾ ಶಿಕ್ಷೆ ಕೊಟ್ಟವ್ವಾ ನೀನಾದ್ರೂ ಎದ್ದೇಳವ್ವಾ ಇಬ್ರೂ ನಮ್ಮನ್ನ ಬಿಟ್ಟು ಯಾಕ್ರವ್ವ ಹೋಗಿಬಿಟ್ರಿ ಎಂದು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಂದೆ-ತಾಯಿ ಬೈದಿದ್ದ ಕ್ಕೆ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ