ಬೆಂಗಳೂರು –
ರಾಜ್ಯದ ಶಿಕ್ಷಕರಿಗೆ ಪ್ರತಿಯೊಂದು ವಿಚಾರದಲ್ಲೂ ತುಂಬಾ ತುಂಬಾ ಅನ್ಯಾಯವಾಗುತ್ತಿದೆ.ಹೀಗಾಗಿ ಶಿಕ್ಷಕರ ಧ್ವನಿ ಯಾಗಿರುವ ಸಂಘಟನೆ ಗಳಿಂದ ಶಿಕ್ಷಕರ ಯಾವುದೇ ರೀತಿಯ ಸಮಸ್ಯೆ ಗಳಿಗೆ ನ್ಯಾಯ ಸಿಗುತ್ತಿಲ್ಲ ಹೀಗಾಗಿ ನೊಂದುಕೊಂಡಿರುವ ರಾಜ್ಯದ ಶಿಕ್ಷಕರು ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಹೌದು ಚುನಾವಣೆವರೆಗೂ ಶಿಕ್ಷಕರ ಮೇಲೆ ಪ್ರೀತಿ ಚುನಾವಣೆ ಮುಗಿದ ತಕ್ಷಣ ಸಂಘದ ಮೇಲೆ ಪ್ರೀತಿ ಇಂಥ ಮನೋಭಾವ ಇಟ್ಟುಕೊಂಡಿದ್ದರೆ ಶಿಕ್ಷಕರಿಗೆ ನ್ಯಾಯ ಎಲ್ಲಿ ಮುಂದೆ ಬರುವುದು ಪದಾಧಿಕಾರಿಗಳಿಗೆ ಸಂಘದ ಮೇಲೆ ಪ್ರೀತಿ ಶಿಕ್ಷಕರ ಮೇಲೆ ಲವ್ ಇಲ್ಲ ಶಿಕ್ಷಕರ ರಕ್ಷಣೆಗಾಗಿ ಕಟ್ಟಿದ ಸಂಘ ಶಿಕ್ಷಕರನ್ನೇ ಭಕ್ಷಿಸುವ ಮಟ್ಟಕ್ಕೆ ಬೆಳೆದಿದೆ ಇದರೊಂ ದಿಗೆ ಕಾಸಿಗಾಗಿ 80 ಸಾವಿರ ಶಿಕ್ಷಕರನ್ನು ಭಕ್ಷಿಸುವ ಪ್ರಯತ್ನ ನಡೆದಿದೆ ಸಂಘ ಕಟ್ಟಿ ಎಷ್ಟು ವರ್ಷಗಳು ಕಳೆದಿದೆ ಅವರ ಸಾಧನೆಯನ್ನು ಕೇಳಿದರೆ ಶೂನ್ಯ ಮೈಲಿಗಲ್ಲುಗಳ ಇಲ್ಲ ಶಿಕ್ಷಕರಿಗಾಗಿ ಯಾವುದಾದರೂ ವಸತಿ ಸಮುಚ್ಚಯ ಗಳನ್ನು ನಿರ್ಮಿಸಿದ್ದಾರೆ.ವಾರ್ಷಿಕ ವಂತಿಗೆಯನ್ನು ಉಳಿಸಿ ಯಾವು ದಾದರೂ ಒಂದು ನಿವೇಶನವನ್ನು ಹಂಚಿದ್ದಾರೆ ಶಿಕ್ಷಕರಿಗೆ ಯಾವುದಾದರೂ ಮೆಡಿಕಲ್ ಇನ್ಶೂರೆನ್ಸ್ ಸ್ಕೀಮ್ ನ ಪರಿಚಯಿಸಿದ್ದಾರೆನಾ ವಂತಿಕೆ ಹಣ ಮಾತ್ರ ಖಾಲಿಯಾಗಿದೆ ವಾರ್ಷಿಕ 4ರಿಂದ 5 ಕೋಟಿ ಹಣ ಸಂಗ್ರಹವಾಗುತ್ತಿತ್ತು ಪಾಪ ಅನೇಕ ಶಿಕ್ಷಕರು ಇಂದು ಮಹಾನಗರಗಳಲ್ಲಿ ನಿವೇ ಶನ ವಿಲ್ಲದೆ ಬಾಡಿಗೆ ಮನೆಗಳಲ್ಲಿ ಜೀವನ ನಡೆಸುತ್ತಿರು ವುದು ಅನೇಕ ಶಿಕ್ಷಕರಿಗೆ ಗಂಭೀರವಾದ ಆರೋಗ್ಯ ಸಮಸ್ಯೆ ಗಳ ಒಂದು ಕಾಡುತ್ತಿರುವುದು ನಾವು ಕಾಣುತ್ತಿದ್ದೇವೆ ಅಂತಹವರಿಗಾಗಿ ಯಾವುದಾದರೂ ಒಂದು ಯೋಜನೆ ನಿರ್ಮಿಸಿದ್ದಾರೆ ಸಂಘದ ಹೆಸರಿನಲ್ಲಿ ಯಾವುದಾದರೂ ಒಂದು ಆಸ್ಪತ್ರೆಯನ್ನು ನಿರ್ಮಿಸಿದ್ದಾರೆನಾ ಯಾವ ಯೋಜನೆಯಿದೆ ಇವರ ಮೈಲಿಗಲ್ಲು ಆಶ್ಚರ್ಯವಾಗುತ್ತೆ ಇವರ ಸಾಧನೆ ಪದಾಧಿಕಾರಿಗಳು ಸಂಘದ ಮೇಲೆ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ ಸಾಧನೆ ಕೇಳಿದರೆ ಶೂನ್ಯ ಇಷ್ಟು ಮಾತ್ರಕ್ಕೆ ನಮ್ಮ ವಂತಿಕೆಯನ್ನು ಯಾಕೆ ನೀಡಬೇಕು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ.ಇವರ ಸಾಧನೆ ಸಂಘಕ್ಕೋಸ್ಕರ 80000 ವಿವಿಧ ವಿಭಾಗದಲ್ಲಿ ಪದವಿ ಪಡೆದ ಶಿಕ್ಷಕರನ್ನು ಒಂದರಿಂದ ಐದನೇ ತರಗತಿ ಡಿಮೋಷನ್ ಮಾಡಿಸಿದ್ದು ಎಲ್ಲಿ ಎಲ್ಲರನ್ನೂ ಜಿಪಿಟಿ ಶಿಕ್ಷಕರನ್ನಾಗಿ ಪರಿಗಣಿಸಿದರೆ ಸಂಘಕ್ಕೆ ಎಲ್ಲಿ ಉಳಿಗಾಲವಿಲ್ಲ ಅನ್ನುವುದು ಇವರ ದೊಡ್ಡ ಭಯ ಶಿಕ್ಷಕರ ರಕ್ಷಣೆಗಾಗಿ ಕಟ್ಟಿದ ಸಂಘ ಶಿಕ್ಷಕರಿಗೆ ನ್ಯಾಯ ಕೊಡಲು ಸಾಧ್ಯವಾಗಿಲ್ಲ ಅಂದರೆ ಸಂಘ ಯಾಕೆ ಬೇಕು ಎಂಬ ಪ್ರಶ್ನೆ ಕಾಡುವುದು ಸಹಜ.ಪದವೀಧರರ ಮಿತ್ರರೇ ನಿಮಗೆ ನ್ಯಾಯ ಬೇಕು ಸಂಘ ಬೇಕು ನೀವು ಆಲೋಚನೆ ಮಾಡಿ.ಇವರಿಗೆ ಇವರ ಸಾಧನೆಯನ್ನು ಸಿಂಹಾವಲೋಕನ ಮಾಡಿ.ಇದರಲ್ಲಿ ಏನೋ ಸ್ವಾರ್ಥ ಆಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಹಾಗಾಗಿ ಎಲ್ಲಾ ಪದವೀ ಧರ ಶಿಕ್ಷಕರು ಗಳೇ ನೀವು ಯಾರನ್ನೂ ನಂಬದೇ ಹೋರಾ ಟಕ್ಕೆ ಮುಂದಾಗಿ ನಿಮ್ಮನೆ ನಿಮ್ಮ ವಿದ್ಯಾರ್ಹತೆಗೆ ನ್ಯಾಯ ಪಡೆದುಕೊಳ್ಳಿ ಏಳಿ ಎದ್ದೇಳಿ ಸ್ನೇಹಿತರೆ.