ಬೆಂಗಳೂರು –
ಸರಕಾರಿ ಶಾಲಾ ಶಿಕ್ಷಕರಾಗಿ ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳಿಗೆ ಈಗ ಹಿಂಬಡ್ತಿಯ ಆತಂಕ ಎದುರಾಗಿದೆ.ಹೌದು 1-7ನೇ ತರಗತಿವರೆಗೆ ಭೋಧಿಸುತ್ತಿದ್ದ ಶಿಕ್ಷಕರು ಇನ್ನು ಮುಂದೆ 5ನೇ ತರಗತಿಯವರೆಗೆ ಮಾತ್ರ ಬೋಧಿಸಬೇಕಾಗುತ್ತದೆ.ಪ್ರಾಥಮಿಕ ಶಾಲಾ ಶಿಕ್ಷಕರಾಗಿ 7ನೇ ತರಗತಿವರೆಗೆ ಬೋಧಿಸುತ್ತಿರುವ ಶಿಕ್ಷಕರಿಗೆ ಮುಂಬಡ್ತಿ ಇಲ್ಲದೆ ಹೊಸ ನೇಮಕಾತಿಗೆ ಸರ್ಕಾರ ಕ್ರಮ ವಹಿಸಿರುವು ದು ಶಿಕ್ಷಕರಲ್ಲಿ ತೀವ್ರ ಅಸಮಾಧಾನ ಉಂಟುಮಾಡಿದೆ.
ಒಂದು ಕಡೆಗೆ 15 ಸಾವಿರ ಪದವೀದರ ಶಿಕ್ಷಕರ ನೇಮಕ ಪ್ರಕ್ರಿಯೆ ಶುರುವಾಗಿದೆ.ಆದರೆ ಸೇವೆಯಲ್ಲಿರುವ ಶಿಕ್ಷಕರಲ್ಲಿ ಅನೇಕರು ಪದವೀದರಿದ್ದರೂ ಅವರಿಗೆ ನಿಯಮಾನುಸಾರ ಇಲಾಖೆಯಿಂದ ಪದೋನ್ನತಿಗೆ ಪರೀಕ್ಷೆ ನಡೆಸುತ್ತಿಲ್ಲ. ಬದ ಲಾಗಿ ಮುಂದಿನ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನವಾಗುತ್ತಿರುವ ಹಿನ್ನೆಲೆಯಲ್ಲಿ 1-7 ರ ಬದಲಿಗೆ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ.,ಯು.ಕೆ.ಜಿ.) ರಿಂದ 5ನೇ ತರಗತಿ ವರೆಗೆ ಈ ಶಿಕ್ಷಕರನ್ನು ಸೀಮಿತಗೊಳಿಸಲು ಸಿದ್ಧತೆ ನಡೆಯುತ್ತಿದೆ.
ಸರ್ಕಾರಿ ಶಾಲೆಗಳಲ್ಲಿ ಪದವೀದರ ಪ್ರತಿಭಾನ್ವಿತ ಶಿಕ್ಷಕರ ಕೊರತೆಯಿದೆ.ಈ ಹಿಂದೆ 10 ಸಾವಿರ ಶಿಕ್ಷಕರ ನೇಮಕಾತಿ ನಡೆಸಿದಾಗ ಸುಮಾರು 3,200 ಶಿಕ್ಷಕರನ್ನು ಮಾತ್ರ ಭರ್ತಿ ಮಾಡಿಕೊಳ್ಳಲು ಸಾಧ್ಯವಾಗಿತ್ತು. ಹೀಗಾಗಿ ಈಗಾಗಲೇ ಬೋಧನೆ ನಡೆಸುತ್ತಿರುವ ಶಿಕ್ಷಕರಿಗೆ ನಿಯಮಾನುಸಾರ ಪರೀಕ್ಷೆ ನಡೆಸಿ ಅವರನ್ನು ಪದವೀಧರ ಶಿಕ್ಷಕರ ಸಾಲಿಗೆ ಸೇರಿಸಬೇಕು.ಹೊಸ ನೇಮಕದ ಮೊದಲೇ ಇದನ್ನು ಮಾಡಬೇಕು.ಹೊಸ ನೇಮಕ ಅನಂತರ ಹುದ್ದೆಗಳು ಖಾಲಿ ಇಲ್ಲದಿದ್ದರೆ ಪದೋನ್ನತಿ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರತಿಭಾನ್ವಿತ ಪದವೀದರ ಶಿಕ್ಷಕರ ಕೊರತೆ ನೀಗಿಸಲು ಸೇವಾ ನಿರತ ಶಿಕ್ಷಕರಿಗೆ ಮೊದಲ ಆದ್ಯತೆ ನೀಡಬೇಕು ಎಂಬುದು ಶಿಕ್ಷಕರ ಆಗ್ರಹವಾಗಿದೆ.