ಚಿಕ್ಕಮಗಳೂರು –
ರಾಜ್ಯದಲ್ಲಿ ಮೊದಲ ಹೈಟೆಕ್ ಡಿಜಿಟಲ್ ಗ್ರಂಥಾಲಯ ವನ್ನು ಚಿಕ್ಕಮಗಳೂರಿನ ಸರ್ಕಾರಿ ಶಾಲೆಯಲ್ಲಿ ಆರಂಭ ಮಾಡಲಾಯಿತು.ಹೌದು ಚಿಕ್ಕಮಗಳೂರಿನ ಜಿಲ್ಲೆಯ ಹರಿಹರದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟನಾ ಮಾಡಲಾ ಯಿತು

ಇದೇ ವೇಳೆ ಶಾಲೆಯನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಿ ಮಕ್ಕಳೊಂದಿಗೆ ಮಕ್ಕಳಾದ ಸಚಿವರು ಕೆಲವೊತ್ತು ಸರ್ಕಾರಿ ಶಾಲೆಯಲ್ಲಿ ಸಮಯವನ್ನು ಕಳೆದರು.ನಂತರ ಗ್ರಾಮ ಪಂಚಾಯಿತಿ ಕಚೇರಿಗೆ ಸಚಿವರು ಹಾಗೂ ಶಾಸಕ ಸಿ ಟಿ ರವಿ ಭೇಟಿ ನೀಡಿದರು.ಇದೇ ವಿದ್ಯಾರ್ಥಿಗಳ ಜೊತೆ ಮಾತನಾಡಿ ಚರ್ಚೆ ಮಾಡಿದರು

ಇನ್ನೂ ಇದೇ ವೇಳೆ ಜಿಲ್ಲೆಯ ಶೈಕ್ಷಣಿಕ ಸ್ಥಿತಿಗತಿಯ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿಯನ್ನು ಪಡೆದುಕೊಂಡರು.