ಚಿಕ್ಕಮಗಳೂರು –
ಚಿಕ್ಕಮಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದ ಉದ್ಘಾ ಟನಾ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಪಾಲ್ಗೊಂಡು ಚಾಲನೆ ನೀಡಿದರು
ಇನ್ನೂ ಇದೇ ವೇಳೆ ಮಾತನಾಡಿದ ಅವರು ಕಾಯಿಲೆಗಳು ಬರದಂತೆ ತಡೆಯಲು,ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ನಿಯಮಿತ ತಪಾಸಣೆ ಅಗತ್ಯವಿದ್ದು ಈ ಶಿಬಿರದ ಸದುಪ ಯೋಗ ಪಡೆದಕೊಳ್ಳಬೇಕೆಂದು ಚಿಕ್ಕಮಗಳೂರಿನ ಸಾರ್ವಜನಿಕರಲ್ಲಿ ಮನವಿ ಮಾಡಿದರು
ಈ ಒಂದು ಸಮಯದಲ್ಲಿ ಆದಿಚುಂಚನಗಿರಿ ಮಠದ ಪರಮಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು, ಶ್ರೀ ಗುಣನಾಥ ಸ್ವಾಮೀಜಿಗಳು,ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವರು ಉಡುಪಿ- ಚಿಕ್ಕಮಗಳೂ ರು ಲೋಕಸಭಾ ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ,ಚಿಕ್ಕಮಗಳೂರಿನ ಜನಪ್ರಿಯ ಶಾಸಕರಾದ ಸಿ ಟಿ ರವಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿ ದ್ದರು.