ಬೀದರ –
ಎಲ್ಲರ ಹಾಗೇ ನಮ್ಮನ್ನೂ ರಾಜ್ಯ ಸರ್ಕಾರಿ ನೌಕರನ್ನಾಗಿ ಮಾಡಿ ಹಾಗೇ ಕೆಲ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಪ್ರತಿಭಟನೆ ಇಂದು ಮುಂದುವರೆದಿದೆ. ಎರಡನೇಯ ದಿನವಾದ ಇಂದು ಸಾರಿಗೆ ನೌಕರರು ಸೇವೆಯಿಂದ ದೂರ ಉಳಿದು ಹೋರಾಟವನ್ನು ಮಾಡ್ತಾ ಇದ್ದಾರೆ.ಇನ್ನೂ ಇವೆಲ್ಲದರ ನಡುವೆ ಹೋರಾಟ ಮಾಡುತ್ತಿದ್ದ ಬಸ್ ಚಾಲಕನೊಬ್ಬರು ನಿನ್ನೇಯಸ್ಟೇ ಬೆಳಗಾವಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಮತ್ತೊಬ್ಬ ನೌಕರರ ಸಾವಿಗೀಡಾಗಿದ್ದಾರೆ. ಕರ್ತವ್ಯ ಮಾಡುವಾಗ ಬೀದರ್ ನಲ್ಲಿ ಸಾರಿಗೆ ಸಿಬ್ಬಂದಿ ಸಾವಿಗೀಡಾಗಿದ್ದಾರೆ.
ಕರ್ತವ್ಯ ವೇಳೆ ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದಾರೆ. ಮಹಿಬೂಬ್ ಹೃದಯಾಘಾತದಿಂದ ಸಾವಿಗೀಡಾದ ದುರ್ದೈವಿ ಡ್ರೈವರ್ ಆಗಿದ್ದಾರೆ. ಇಂದು ಮುಂಜಾನೆ ಔರಾದ್ ನಿಂದ ನಾಂದೇಡ್ ( ಮಹಾರಾಷ್ಟ್ರ ) ಬಸ್ ಓಡಿಸಿದ ಡ್ರೈವರ್ ಒತ್ತಾಯ ಪೂರ್ವಕವಾಗಿ ಕರ್ತವ್ಯಕ್ಕೆ ಹಾಜರು ಮಾಡಿಸಿಕೊಂಡ ಅಧಿಕಾರಿಗಳು ಇವರನ್ನು ಬಸ್ ಕೊಟ್ಟು ಕಳಿಸಿದ್ದರಂತೆ.
ಒಂದು ಕಡೆ ಬೀದರ್ ನ ಕೇಂದ್ರ ಬಸ್ ನಿಲ್ದಾಣದಲ್ಲಿ ಸಿಬ್ಬಂದಿ ಪ್ರತಿಭಟನೆ ಮಾಡುತ್ತಿದ್ದಾರೆ ಇನ್ನೊಂದೆಡೆ ಒತ್ತಾಯದ ಮೇಲೆ ಕರ್ತವ್ಯಕ್ಕೆ ಇವರನ್ನು ಕಳಿಸಿದ್ದು ಸಧ್ಯ ಸಿಬ್ಬಂದಿ ಹೃದಯಾಘಾತದಿಂದ ಇವರು ಸಾವಿಗೀಡಾಗಿದ್ದಾನೆ.
ಈಗಾಗಲೇ ಬೆಳಗಾವಿಯಲ್ಲಿ ಒರ್ವ ನೌಕರ ಸಾವಿಗೀಡಾಗಿದ್ದು ಈಗ ಬೀದರ್ ನಲ್ಲಿ ಮತ್ತೊರ್ವ ನೌಕರ ಸಾವಿಗೀಡಾಗಿದ್ದು ದುರಂತವೇ ಸರಿ.ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ನೌಕರರೊಂದಿಗೆ ಮಾತುಕತೆ ಮಾಡಿ ಸ್ಪಂದಿಸುವುದು ಅವಶ್ಯಕತೆ ಇದೆ.