ಶಿವಮೊಗ್ಗ –
ಸಂವಿಧಾನ ಶಿಲ್ಪಿ ಭಾರತರತ್ನ ಮಹಾಮಾನವತಾವಾದಿ ಡಾ ಬಿ.ಆರ್.ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಶುಭಾಶ ಯಗಳನ್ನು ಹೇಳತ್ತಾ ಶಿವಮೊಗ್ಗ ದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಕಚೇರಿಯಲ್ಲಿ ಆಚರಣೆ ಮಾಡಲಾಯಿತು~~~~

ಕೇಂದ್ರ ಸಂಘ ಹಾಗೂ ರಾಜ್ಯದ ಎಲ್ಲಾ ತಾಲ್ಲೂಕು,ಜಿಲ್ಲಾ ಶಾಖೆಗಳಲ್ಲಿ ಡಾ ಬಿ.ಆರ್.ಅಂಬೇಡ್ಕರ್ ರವರ ಜನ್ಮ ದಿನಾ ಚರಣೆಯನ್ನು ಪ್ರತಿವರ್ಷ ಆಚರಿಸುವ ಮೂಲಕ ಗೌರವ ನಮನಗಳನ್ನು ಸಲ್ಲಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೈಲಾ ನಿಯಮಗಳಡಿಯಲ್ಲಿ ಹೊಸ ದಾಗಿ ಅಳವಡಿಸಲು ಕಾರಣೀಭೂತರಾದ ಮೂಲಕ ನೆಚ್ಚಿನ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿರವರಿಗೆ ಧನ್ಯವಾದಗ ಳನ್ನು ಸಲ್ಲಿಸಲಾಯಿತು.

ಇಂದು ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದಲ್ಲಿ ಡಾ ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾ ರ್ಪಣೆ ಮಾಡುವ ಮೂಲಕ ಗೌರವ ನಮನಗಳನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿರವರು ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಸದಾ ಪ್ರೇರಣಾದಾಯಿ.ಜಾತಿ ವ್ಯವಸ್ಥೆಯಡಿ ಸಿಲುಕಿದ್ದ ಶೋಷಿತ ರಿಗೆ ಹೊಸ ಬೆಳಕನ್ನು ತೋರಿಸಿದ ಅವರು ಅಮರಚೇತನ ವೆಂದರು.ರಾಜ್ಯ ಉಪಾಧ್ಯಕ್ಷರಾದ ಆರ್ ಮೋಹನ್ ಕುಮಾರ್ ಜಿಲ್ಲಾ ಕಾರ್ಯದರ್ಶಿ ಡಿ.ಟಿ. ಕೃಷ್ಣಮೂರ್ತಿ, ರಂಗನಾಥ್,ಲಕ್ಷ್ಮಣ್,ಪ್ರಸನ್ನ,ವೆಂಕಟೇಶ್,ಸುರೇಶ್, ಶೇಖರಪ್ಪ,ಕೊಟ್ರೇಶ್,ಇತರರು ಉಪಸ್ಥಿತರಿದ್ದರು.