ಬೆಂಗಳೂರು –
ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸಿಕ್ಕ ಸಿಕ್ಕವರ ಬಳಿ ಲಕ್ಷ ಲಕ್ಷ ಹಣ ಪಡೆದು ವಂಚಿಸುತ್ತಿದ್ದ ನಯ ವಂಚಕಿಯನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.ಹೌದು ಪಾರ್ವತಿ ಬಂಧಿತ ವಂಚಕಿಯಾಗಿ ದ್ದಾಳೆ.ಲೆಕ್ಕಪರಿಶೋಧಕ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಪ್ರತಿಯೊಬ್ಬರ ಬಳಿ ಆರು ಲಕ್ಷ ಹಣ ಪೀಕಿರುವ ಆರೋಪ ಹಣ ಕೊಟ್ಟಿರುವವರಿಂದ ಕೇಳಿ ಬಂದಿದೆ.
ಎರಡು ತಿಂಗಳಲ್ಲಿ ನಿಮ್ಮ ಮನೆಗೆ ಕೆಲಸದ ಆದೇಶದ ಪ್ರತಿ ಬರುತ್ತದೆ ಎಂದಿದ್ದಳು ಎರಡಲ್ಲ ಇಪ್ಪತ್ತು ತಿಂಗಳಾದರೂ ಕೆಲಸದ ಆದೇಶದ ಪ್ರತಿ ಮನೆಗೆ ಬರದಿದ್ದಾಗ ಪಾರ್ವತಿಗೆ ಹಣ ಕೊಟ್ಟಿದ್ದ ಆಕಾಂಕ್ಷಿಗಳು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಇನ್ನೂ ಇತ್ತ ದೂರು ದಾಖಲಾಗುತ್ತಿದ್ದಂತೆ ಈ ಒಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಂಚಕಿ ಪಾರ್ವತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಬೇರೆ ಬೇರೆ ಕಡೆ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿರುವುದು ಬಯಲಾಗಿದೆ ಸಧ್ಯ ನಯವಂಚಕಿಗೆ ಪೊಲೀಸರು ಎಡೆ ಮೂರೆ ಕಟ್ಟಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.