ಹುಬ್ಬಳ್ಳಿ ಧಾರವಾಡ –
ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಕರ ಬೇಕು ಬೇಡಿಕೆಗಳು ನೆನೆಗುದಿಗೆ ಬಿದ್ದಿವೆ.ಕಳೆದ ನಾಲ್ಕು ವರ್ಷಗ ಳಲ್ಲಿ ಈ ನಾಡು ಕಂಡ ನಾಲ್ಕು ಮುಖ್ಯ ಮಂತ್ರಿಗಳವರಿಗೆ ಐದು ಶಿಕ್ಷಣ ಸಚಿವರಿಗೆ ನಮ್ಮ ಸಂಘಟನೆಗಳಿಂದ ಮನವಿ ಕೊಟ್ಟು ಕೊಟ್ಟು ಕೈ ಸೋತು ಹೋಗಿವೆ.ಈಗಲಾದರೂ ನಮ್ಮ ಈಗಿನ ಮುಖ್ಯ ಮಂತ್ರಿಗಳು ಸಭಾಪತಿಗಳು ಶಿಕ್ಷಣ ಸಚಿವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಇಲಾಖೆ ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಈ ಕೆಳಗಿನ ಬೇಡಿಕೆಗಳನ್ನು ಪ್ರಥಮಾಧ್ಯತೆಯಲ್ಲಿ ಜೂನ್ ಹದಿನೈದ ರೊಳಗೆ ಈಡೇರಿಸಬೇಕು. ಇಲ್ಲವಾದಲ್ಲಿ ಅಹಿಂಸಾತ್ಮಕ ಚಳುವಳಿ ಹೋರಾಟ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಹೇಳಿದರು
ಹುಬ್ಬಳ್ಳಿ ಯಲ್ಲಿ ಸುದ್ದಿ ಗೋಷ್ಟಿ ಯಲ್ಲಿ ಮಾತನಾಡಿದ ಅವರು ಶೀಘ್ರವಾಗಿ ಕೇಂದ್ರ ಮಾದರಿ ಏಳನೇ ವೇತನ ಆಯೋಗ ಸಮಿತಿ ರಚಿಸಬೇಕು.ವಿಳಂಬವಾದಲ್ಲಿ ಶೇ.ಇಪ್ಪತ್ತೈದು ಮಧ್ಯಂತರ ಪರಿಹಾರ ನೀಡಬೇಕು.ಹೊಸ ಪಿಂಚಣಿ ಯೋಜನೆ ಕೈ ಬಿಟ್ಟು ಹಳೆ ಪಿಂಚಣಿ ಯೋಜನೆ ಶೀಘ್ರವಾಗಿ ಜಾರಿಗೊಳಿಸಬೇಕು.ಗ್ರಾಮೀಣ ಶಿಕ್ಷಕರಿಗೆ ಐದು ಸಾವಿರ ರೂಪಾಯಿಗಳನ್ನು ಗ್ರಾಮೀಣ ಭತ್ಯೆ ನೀಡಬೇಕೆಂದು ಒತ್ತಾಯವನ್ನು ಮಾಡಿದರು
ಶಿಕ್ಷಕರು ಬಯಸಿದ ಜಿಲ್ಲೆಗೆ ಸೇವೆಯಲ್ಲಿ ಒಂದು ಬಾರಿ ವರ್ಗಾವಣೆಯನ್ನು ಸುಗ್ರೀವಾಜ್ಞೆ ಹೊರಡಿಸುವುದರ ಮೂಲಕ ವರ್ಗಾವಣೆ ಕಾಯ್ದೆ ತಿದ್ದುಪಡಿ ಮಾಡಿ ವರ್ಗಾ ವಣೆ ನಡೆಸಬೇಕು.ಆರು ವರ್ಷಗಳಲ್ಲಿ ಮೂರು ಬಾರಿ ಮಾತ್ರ ವರ್ಗಾವಣೆಯಾಗಿದ್ದು ಈ ಕೂಡಲೇ ಈ ಸಾಲಿನ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಬೇಕು.ಹೊಸ ತಾಲೂಕು ಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇಮಿಸಿ ಕಾರ್ಯಾಲ ಯವನ್ನು ಆರಂಭಿಸಬೇಕು.ಉತ್ತರ ಕರ್ನಾಟಕದಲ್ಲಿ ಬೃಹತ್ ಪ್ರಮಾಣದಲ್ಲಿ ಶಿಕ್ಷಕ ಸದನವನ್ನು ಹುಬ್ಬಳ್ಳಿ ಅಥವಾ ಧಾರವಾಡದಲ್ಲಿ ನಿರ್ಮಿಸಬೇಕು.ಸದ್ಯ ಬೆಂಗಳೂ ರಿನಲ್ಲಿರುವ ಶಿಕ್ಷಕ ಸದನವನ್ನು ನವೀಕರಿಸಬೇಕು.ಕಲಿಕಾ ಚೇತನ ತರಬೇತಿಯನ್ನು ಮೇ ಹದಿನೈದರ ನಂತರ ಪ್ರಾರಂಭಿಸಬೇಕು.ಶಾಲೆಗಳನ್ನು ಬೇಸಿಗೆ ರಜೆ ಪೂರ್ಣ ನೀಡಿ.ಜೂನ್ ಒಂದಕ್ಕೆ ಶಾಲೆ ಪ್ರಾರಂಭಿಸಬೇಕೆಂದು ರಾಜ್ಯಾದ್ಯಕ್ಷರಾದ ಅಶೋಕ ಸಜ್ಜನ ಒತ್ತಾಯಿಸಿದರು
ಸುದ್ದಿ ಗೋಷ್ಠಿಯಲ್ಲಿ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಗೌರವಾಧ್ಯಕ್ಷ ರಾದ ಎಲ್.ಆಯ್.ಲಕ್ಕಮ್ಮನವರ.ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ.ಸಿ.ಉಪ್ಪಿನ.ಧಾರವಾಡ ಜಿಲ್ಲಾಧ್ಯಕ್ಷರಾದ ಅಕ್ಬರಲಿ ಸೊಲ್ಲಾಪೂರ.ಉಪಾಧ್ಯಕರಾದ ಮರಿತಮ್ಮಪ್ಪ ಅಕ್ಕಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೀವ್ ಸಿಂಗ್ ಹಲವಾಯಿ ಸಲಹಾ ಸಮಿತಿಯ ಗೋವಿಂದ ಜುಜಾರೆ ಡಿಟಿ ಬಂಡಿವಡ್ಡರ್,ಆರ್ ಎಂ ಕಮ್ಮಾರ ಉಪಸ್ಥಿತರಿದ್ದರು