ಬೆಂಗಳೂರು –
ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.ನಗರದ ರಾಜಾಜಿನಗರದಲ್ಲಿರುವ ಭೋವಿ ಅಭಿವೃದ್ಧಿ ನಿಗಮದ ಎಂಡಿ ಲೀಲಾವತಿ ಮತ್ತು ಜಿಎಂ ನಾಗರಾಜಪ್ಪ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಕಡತಗಳ ಪರಿಶೀಲನೆ ಕೈಗೊಂಡಿದ್ದರು.ಭೋವಿ ಅಭಿವೃದ್ಧಿ ಪ್ರಾಧಿಕಾ ರದ ವ್ಯವಹಾರಗಳ ಸಂಬಂಧ ಸಾರ್ವಜನಿಕ ರಿಂದ ದೂರು ಗಳು ಕೇಳಿ ಬಂದಿದ್ದವು.ಪ್ರಾಥಮಿಕ ತನಿಖೆಯಲ್ಲಿ ಉದ್ಯಮ ಶೀಲತೆ ಯೋಜನೆ,ಐರಾವತ ಯೋಜನೆ,ಗಂಗಾಕಲ್ಯಾಣ, ಭೂ ಒಡೆತನ ಯೋಜನೆ ಸೇರಿದಂತೆ ಹಲವಾರು ಯೋಜನೆ ಗಳ ಕುರಿತು ದೂರು ಗಳು ಕೇಳಿ ಬಂದಿದ್ದವು

ಸಮೃದ್ಧಿ, ನೇರ ಸಾಲ ಹಾಗೂ ಇತರ ಯೋಜನೆಗಳಲ್ಲಿ ಅವ್ಯವಹಾರ ಬೆಳಕಿಗೆ ಬಂದಿತ್ತು.ಹೀಗಾಗಿ ಎಂ.ಡಿ ಲೀಲಾ ವತಿ ಹಾಗೂ ಜಿ.ಎಂ ನಾಗರಾಜ್ ವಿರುದ್ಧ ಪ್ರಕರಣ ದಾಖಲಿ ಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.ಬೆಂಗಳೂರು ನಗರ ಎಸಿಬಿ ಯಲ್ಲಿಎಫ್‌ಐಆರ್ ದಾಖಲಾಗಿದೆ.ಈ ಹಿನ್ನೆಲೆ ಭೋವಿ ಅಭಿವೃದ್ಧಿ ಪ್ರಾಧಿಕಾರದ ಎಂ.ಡಿ ಲೀಲಾವತಿ ಹಾಗೂ ನಾಗರಾಜ್ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ಮಾಡಲಾಗಿತ್ತು.ಈ ವೇಳೆ 10 ಲಕ್ಷ ರೂ ಹಣ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.