ತುಮಕೂರು –
ಪ್ರಧಾನಿಗಳ ಆಶಯದಂತೆ ವ್ಯಾಕ್ಸಿನ್ ನೀಡಿ ಶಾಲೆ ಆರಂಭಿ ಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.ತುಮಕೂರು ಜಿಲ್ಲೆ ಶಿರಾ ನಗರದಲ್ಲಿ ಮಾತನಾಡಿದ ಅವರು ವ್ಯಾಕ್ಸಿನ್ ಹಾಕಿರುವುದ ರಿಂದ ನಾಲ್ಕನೇ ಎದುರಿಸಲು ಅನುಕೂಲವಾಗಿದೆ.ಅದೇ ಧೈರ್ಯದ ಮೇಲೆ ಶಾಲೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು
ಮುಂದಿನ ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ನೀಡಲಾಗುವುದು ಎಂದು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಯಾವ ದೃಷ್ಟಿಯಲ್ಲಿ ಹೇಳಿದ್ದಾರೆಯೋ ನನಗೆ ಗೊತ್ತಿಲ್ಲ ಎಂದು ಸಚಿವರು ತಿಳಿಸಿದ್ದಾರೆ.ಇನ್ನೂ ಶಾಲಾ ಆರಂಭ ವಿಚಾರ ಕುರಿತು ರಾಜ್ಯದ ಯಾವುದೇ ಶಿಕ್ಷಕರು ಆತಂಕ ಪಡಬಾ ರದು ನಿಮ್ಮೊಂದಿಗೆ ಇಲಾಖೆ ನಾನು ಇದ್ದೇನಿ ಇನ್ನೂ ಮಕ್ಕಳು ಕೂಡಾ ವ್ಯಾಕ್ಸಿನೇಷನ್ ತಗೆದುಕೊಳ್ಳುತ್ತಿದ್ದು ಪೋಷಕರು ಕೂಡಾ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.ಇದರೊಂದಿಗೆ ಶಿಕ್ಷಕರು ಕೂಡಾ ಶಾಲಾ ಆರಂಭಕ್ಕೂ ಮುನ್ನ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳ ಬೇಕು ಎಂದರು.