ಕಾರವಾರ –
ಸದ್ಯದ ಮಟ್ಟಿಗೆ ರಾಜಕೀಯಕ್ಕೆ ಬಂದು ಚುನಾವಣೆಗೆ ನಿಲ್ಲುವ ಯಾವುದೇ ಚಿಂತನೆಯಿಲ್ಲ ರಾಜ್ಯಾಧ್ಯಕ್ಷನಾಗಿ ನೌಕರರ ಸೇವೆ ಮಾಡುತ್ತೇನೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಹೇಳಿದ್ದಾರೆ.ಕಾರವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು ರಾಜಕೀಯಕ್ಕೆ ಬಂದು ಮುಂದಿನ ಚುನಾವಣೆ ಯಲ್ಲಿ ನಿಲ್ಲುತ್ತೇನೆ ಎನ್ನುವ ಸುದ್ದಿ ಕೆಲ ಪತ್ರಿಕೆಯಲ್ಲಿ ಬಂದಿದೆ.ಇಂತಹ ಯಾವ ಚಿಂತನೆಯನ್ನು ಮಾಡಿಲ್ಲ ಎಂದರು

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ರಾಜಕೀ ಯಕ್ಕೆ ಹೋದ ಹಲವರನ್ನ ನೋಡಿದ್ದೇನೆ.ಮೂರ್ನಾಲ್ಕು ಚುನಾವಣೆ ಸೋತು ಶಾಸಕರಾದರನ್ನ ಸಹ ನ಼ೋಡಿದ್ದೇನೆ. ರಾಜಕೀಯಕ್ಕೆ ಬಂದು ಚುನಾವಣೆ ಎದುರಿಸುವ ಯಾವ ಆಸಕ್ತಿ ತನ್ನ ಮೇಲಿಲ್ಲ.ಎಂಟು ವರ್ಷ ನೌಕರರ ಸಂಘದ ಜಿಲ್ಲಾಧ್ಯಕ್ಷನಾಗಿ ಎರಡುವರೆ ವರ್ಷದಿಂದ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ.ರಾಜ್ಯದಲ್ಲಿ ಆರು ಲಕ್ಷ ನೌಕರರು ಹೊಂದಿರುವ ಸಂಘಟನೆ ಅಧ್ಯಕ್ಷನಾಗಿದ್ದೇನೆ.ಸುಮಾರು ೫೦ ಲಕ್ಷ ಜನ ನೌಕರರ ಕುಟುಂಬದವರು ಇದ್ದಾರೆ.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹುದ್ದೆ Mla ಗಿಂತ ದೊಡ್ಡದಿದೆ ಸಚಿವ ಸ್ಥಾನಕ್ಕೆ ಸಮನಾಗಿದ್ದು ಕೆಲಸ ಮಾಡಲು ಒಳ್ಳೆಯ ಅವಕಾಶ ಸಿಕ್ಕಿದೆ. ರಾಜ್ಯದ ಯಾವ ಭಾಗಕ್ಕೆ ಹೋದರು ಗೌರವ ಸಿಗುವ ಹುದ್ದೆಯಾಗಿದ್ದು ಮುಂದೆ ಸಹ ನೌಕರರ ಸಮಸ್ಯೆ ಬಗ್ಗೆ ಧ್ವನಿಯಾಗಿ ದುಡಿಯುತ್ತೇನೆ





















