ಹುಬ್ಬಳ್ಳಿ ಧಾರವಾಡ –
ನಾಲ್ಕು ಮೂರು ಹೇಳಿ ಚಾಲು ಮಾಡಿಸಿದ್ರು – ಈಗ ನಾಲ್ಕು ನಾಲ್ಕು ಮಾಡಾಕಾ ಹೇಳಕತ್ತಾರ ಅಧಿಕಾರಿಗಳ ಟಾರ್ಚರ್ ಗೆ ಬೇಸತ್ತ ಚಾಲಕರು…..ಇದು ಚಿಗರಿ ಬಸ್ ಚಾಲಕರ ಕಥೆ ವ್ಯಥೆ…..DC ಅವರೇ ಇದೇನಿದು…..
ಹೌದು ಇದು ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ ಕಥೆ ಆರಂಭ ಗೊಂಡು ಆರೇಳು ವರ್ಷಗಳಾಗಿದ್ದು ಸಧ್ಯ ಬಸ್ ಗಳ ಪರಿಸ್ಥಿತಿ ಸರಿ ಇಲ್ಲ ಇನ್ನೂ ನೂರೆಂಟು ಸಮಸ್ಯೆ ಗಳ ನಡುವೆ ಒತ್ತಡದ ನಡುವೆ ಚಾಲಕರು ಕರ್ತವ್ಯ ಮಾಡ್ತಾ ಇದ್ದಾರೆ ಇನ್ನೂ ಇದರ ನಡುವೆ ಈಗಷ್ಟೇ ಹೊಸದಾಗಿ ಆರಂಭವಾಗಿರುವ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣ ದ ಬಸ್ ಗಳನ್ನು ಪ್ರಾರಂಭ ದಲ್ಲಿ ನಾಲ್ಕು ಮೂರು ಟ್ರಿಪ್ ಮಾಡಲು ಹೇಳಿದರು ಇದಕ್ಕೆ ಚಾಲಕರು ಒಪ್ಪಿಕೊಂಡರು
ಆರಂಭದ ನಂತರ ಸಧ್ಯ ನಾಲ್ಕು ನಾಲ್ಕು ಟ್ರಿಪ್ ಮಾಡಲು ಚಾಲಕರಿಗೆ ಹೇಳ್ತಾ ಇದ್ದಾರೆ ಧಾರವಾಡ ಹೊಸ ಬಸ್ ನಿಲ್ದಾಣ ದಿಂದ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣ ಕ್ಕೆ ತಲುಪಲು ಕನಿಷ್ಠ 50 ನಿಮಿಷಗಳ ಸಮಯ ಬೇಕು ಬಿಟ್ಟು ಬಿಡಲಾರದೆ ಓಡಾಡಿದರು ಕೂಡಾ ಸಮಯ ಸಾಲೊದಿಲ್ಲ ಹೀಗಿರುವಾಗ ಆರಂಭ ದಲ್ಲಿ ಒಂದು ಹೇಳಿ ಈಗ ಮತ್ತೊಂದು ರಾಗ ಶುರು ಮಾಡಿದ್ದಾರೆ ಅಧಿಕಾರಿ ಗಳು
ಸಧ್ಯ ಚಾಲಕರು ಯಾವ ಪರಿಸ್ಥಿತಿ ಯಲ್ಲಿ ಕರ್ತವ್ಯ ಮಾಡ್ತಾ ಇದ್ದಾರೆ ಬಸ್ ಗಳ ಪರಿಸ್ಥಿತಿ ಹೇಗೆ ಇದೆ ಎಲ್ಲವನ್ನೂ ನೋಡಬೇಕಾದ ಅಧಿಕಾರಿ ಗಳು ಕಂಡು ಕಾಣದಂತೆ ಇದ್ದು ಚಾಲಕರಿಗೆ ಇದೊಂದು ದೊಡ್ಡ ಪ್ರಮಾಣದ ಕಿರಿಕಿರಿ ಯಾಗುತ್ತಿದ್ದು ಸಧ್ಯ ಒತ್ತಡದ ನಡುವೆ ಡೂಟಿ ಮಾಡುತ್ತಿರುವ ಚಾಲಕರಿಗೆ ಮತ್ತೊಂದು ತಲೆನೋವು ಆಗಿದ್ದ ಡಿಸಿ ಅವರೇ ಇದೇನಿದು ಚಾಲಕರು ಸುಮ್ಮನೆ ಇದ್ದಾರೆ ಅಂದರೆ ವಿನಾಕಾರಣ ಅವರ ಮೇಲೆ ಒತ್ತಡ ಹಾಕಿ ಮತ್ತೊಂದು ಟ್ರಿಪ್ ಮಾಡಲು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ……



