ಹೊಸಕೋಟೆ –
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ದ್ವಿತೀಯ ಪಿಯುಸಿಯ ವಿದ್ಯಾರ್ಥಿಯೊಬ್ಬನ ಶವ ಲಾರಿಯಲ್ಲಿ ಪತ್ತೆಯಾಗಿದ್ದು ಇದು ಹಲವಾರು ಸಂಶಯ ಗಳಿಗೆ ಎಡೆ ಮಾಡಿಕೊಟ್ಟಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿಯ ಸಮೃದ್ದಿ ಕಾಲೇಜಿನಲ್ಲಿ ಸೋಮನಾಥ್ (19) ಮೃತ ವಿದ್ಯಾರ್ಥಿಯಾಗಿದ್ದಾನೆ

ಕಾಲೇಜಿನಲ್ಲಿ ಟಾಪರ್ ಆಗಿದ್ದ ಸೋಮನಾಥ್ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಲಿದ್ದನು.ಇನ್ನು ಒಂದೇ ಪರೀಕ್ಷೆ ಬಾಕಿ ಇತ್ತು.ಆದರೆ ಏಕಾಏಕಿಯಾಗಿ ಮನೆಯಿಂದ ಕಾಣೆ ಯಾಗಿದ್ದು ಇದೀಗ ಶವ ದೊರೆತಿದೆ.ಮನೆ ಬಿಡುವ ಮೊದಲು ಸ್ನೇಹಿತರು ನನ್ನ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ.ಅವರು ಹಾಗೆ ಮಾಡುವ ಮೊದಲು ಮೊದಲು ನಾನೇ ಸಾಯ್ತೀನಿ ಎಂದು ಡೆತ್ ನೋಟ್ ಬರೆದಿಟ್ಟಿದ್ದ ಎನ್ನಲಾಗಿದೆ.ಮಗ ಕಾಣೆಯಾಗಿರುವ ಬಗ್ಗೆ ಪಾಲಕರು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು
ಪೊಲೀಸರು ಈತನನ್ನು ಹುಡುಕುತ್ತಿರುವಾಗಲೇ ಬೆಂಗಳೂ ರಿನ ಮಾರತಹಳ್ಳಿಯ ಬಳಿ ಲಾರಿಯಲ್ಲಿ ಮೃತದೇಹ ವೊಂದು ಪತ್ತೆಯಾಗಿತ್ತು.ತಮಿಳುನಾಡಿನಿಂದ ಮರಳು ತುಂಬಿಕೊಂಡು ಬಂದಿದ್ದ ಟಿಪ್ಪರ್ ಲಾರಿ ಇದು.ಪೊಲೀಸರು ಈ ಬಗ್ಗೆ ಪರಿಶೀಲನೆ ಮಾಡಿದಾಗ ಮುಖಕ್ಕೆ ಮಾಸ್ಕ್ ಹಾಕ ಲಾಗಿತ್ತು.ಅದು ಅನಾಥಶವವಾಗಿಯೇ ಹೋಗುವುದರ ಲ್ಲಿತ್ತು.ಆದರೆ ಮಾಸ್ಕ್ ಮೇಲೆ ಆತನ ಹೆಸರಿತ್ತು.ಆಗ ಪೊಲೀಸರು ಸುತ್ತಲಿನ ಊರುಗಳಲ್ಲಿ ಈ ಬಗ್ಗೆ ವಿಚಾರಿಸಿ ದಾಗ ಸೋಮನಾಥ್ ಕಾಣೆಯಾಗಿರುವ ಕಂಪ್ಲೇಂಟ್ ತಾಳೆ ಮಾಡಲಾಯಿತು.ಅವನೇ ಇವನು ಎನ್ನುವುದು ತಿಳಿಯಿತು.
ಈತನ ಸಾವಿನ ಬಗ್ಗೆ ಹಲವಾರು ಸಂದೇಹಗಳಿವೆ. ಡೆತ್ ನೋಟ್ ಹಿಂದಿನ ಉದ್ದೇಶವೇನು ಯಾರಾದರೂ ರ್ಯಾಗಿಂಗ್ ಮಾಡುತ್ತಿದ್ದರಾ ಈತನ ಕೊಲೆಯಾಗಿದೆಯೆ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೆ ಎಂಬಿತ್ಯಾದಿ ಪ್ರಶ್ನೆಗಳು ಮೂಡಿವೆ.ಉಸಿರುಕಟ್ಟಿ ಸತ್ತಿರುವ ಶಂಕೆ ವ್ಯಕ್ತವಾ ಗಿದ್ದರೂ ಲಾರಿಯ ಅಡಿಗೆ ಬಂದು ಮೃತಪಟ್ಟಿರಬಹುದು ಎಂದೂ ಹೇಳಲಾಗುತ್ತಿದೆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.