ಬೆಂಗಳೂರು –
ಬೆಂಗಳೂರಿನಲ್ಲಿ ಖಾಸಗಿ ಶಾಲೆ ಮಕ್ಕಳಿಗೆ ಮಾನಸಿಕವಾಗಿ ಚಿತ್ರ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೋಷ ಕರು ಲಗ್ಗೆರೆಯ ನಾರಾಯಣ ಇ-ಟೆಕ್ನೊ ಶಾಲೆ ವಿರುದ್ಧ ಧರಣಿ ನಡೆಸಿದರು.ಪ್ರತಿಭಟಿಸಿದ್ದ ಪೋಷಕರ ಮಕ್ಕಳನ್ನ ಶಾಲೆ ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿರುವ ಪೋಷಕರು,ಬೇರೆ ಮಕ್ಕಳಿಗೆ ಇವರ ಜೊತೆ ಸೇರದಂತೆ ಸೂಚನೆ ನೀಡುತ್ತಾರೆ. ಮಕ್ಕಳಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ.ಇಡೀ ದಿನ ಶಾಲೆಯಲ್ಲಿ ನಿಲ್ಲಿಸಿ ಮಕ್ಕಳಿಗೆ ಶಿಕ್ಷೆ ನೀಡುತ್ತಾರೆ,ಅಲ್ಲದೇ ಬೈಯ್ಯುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಖಾಸಗಿ ಶಾಲೆ ವಿರುದ್ಧ ತಿರುಗಿ ಬಿದ್ದಿದ್ದ ಪೋಷಕರಿಗೆ ಶಾಕ್
ಶಾಲೆ ಕೂಡಾ ಶಾಕ್ ನೀಡಿದ್ದು ಪ್ರತಿಭಟಿಸಿದ್ದ ಪೋಷಕರ ಮಕ್ಕಳನ್ನ ನಾರಾಯಣ ಇ-ಟೆಕ್ನೊ ಶಾಲೆ ಟಾರ್ಗೆಟ್ ಮಾಡ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.ಶುಲ್ಕದ ವಿಚಾರವಾಗಿ ಖಾಸಗಿ ಶಾಲೆ ಪೋಷಕರ ನಡುವೆ ಫೈಟ್ ನಡೆದಿದ್ದು ಶಾಲೆಯಲ್ಲಿ ಮಕ್ಕಳಿಗೆ ಮಾನಸಿಕ ಹಿಂಸೆ ನೀಡುತ್ತಿರುವ ಆರೋಪ ಕೇಳಿ ಬಂದಿದೆ.ಇತರೆ ಮಕ್ಕಳು ಅವರ ಜೊತೆ ಸೇರದಂತೆ ಸಹಪಾಠಿಗಳಿಗೆ ಶಾಲೆಯವರು ಸೂಚನೆ ನೀಡಿದ್ದಾರೆ.ಶಾಲೆಯಲ್ಲಿ ಮಕ್ಕಳನ್ನು ಇಡೀ ದಿನ ನಿಲ್ಲಿಸಿ ಶಿಕ್ಷೆನೀಡಿದ್ದಾರೆ.ಹೀಯಾಳಿಸುವುದು,ಹೋಂ ವರ್ಕ್ ವಿಚಾರದಲ್ಲಿ ತಗಾದೆ ಮಾಡೋದು ಸೇರಿದಂತೆ ವಿವಿಧ ರೀತಿ ಮಕ್ಕಳಿಗೆ ಕಿರುಕುಳ ನೀಡ್ತಿದ್ದಾರೆಂದು ಪೋಷಕರು ಕಿಡಿ ಕಾರಿದ್ದಾರೆ.ಈ ಸಂಬಂಧ ದೂರು ನೀಡಲು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ಪೋಷಕರು ಬಂದಿದ್ದು ಮಕ್ಕಳನ್ನ ಸಾಕ್ಷಿಯಾಗಿಟ್ಟುಕೊಂಡು ಶಾಲೆಯ ವಿರುದ್ಧ ದೂರು ನೀಡಿದ್ದಾರೆ.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ ಯಾವುದೇ ಶಾಲೆಗಳಲ್ಲಿ ಇಂತಹ ಘಟನೆ ನಡೆದರೆ ಅಂಥವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ತೇವೆ.ಇಲಾಖೆ ಬಿಇಒ, ಡಿಡಿಪಿಐ ಮೂಲಕ ತನಿಖೆ ಮಾಡಲು ಹೇಳಿದ್ದು ತನಿಖೆ ಯಲ್ಲಿ ಸಾಬೀತಾದರೆ ಇಲಾಖೆಯಿಂದ ಕಾನೂನು ಕ್ರಮ ಕೈಗೊಳ್ಳುತ್ತೇವೆ.ಯಾವುದೇ ಕಾರಣಕ್ಕೂ ಮಕ್ಕಳಿಗೆ ತೊಂದರೆ ಕೊಡಬಾರದು.ಮಕ್ಕಳ ಶಿಕ್ಷಣದಲ್ಲಿ ಏರುಪೇರು ಮಾಡುವ ಸಂಸ್ಥೆಗೆ ಯೋಗ್ಯವಲ್ಲ.ಮಕ್ಕಳ ಶುಲ್ಕದಿಂದಲೇ ಇನ್ಸಿಟ್ಯೂಷನ್ ಸ್ಥಾಪನೆ ಮಾಡಿರುತ್ತಾರೆ.ಯಾವುದೇ ಇನ್ಸಿಟ್ಯೂಷನ್ ಳಲ್ಲಿ ಈ ರೀತಿಯಾಗಿ ಮಾಡಬಾರದು ಎಂದರು