ಬೆಂಗಳೂರು –
ಕೊನೆಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶಕ್ಕೆ ಮಹೂರ್ತ ನಿಗದಿಯಾಗಿದ್ದು ಮೇ 19 ರಂದು ಫಲಿತಾಂಶ ವನ್ನು ಘೋಷಣೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಫಲಿತಾಂಶ ನಿರೀಕ್ಷೆ ಗಿಂತ ಕೊಂಚ ತಡವಾಗಿದ್ದು ಮೇ 19ರಂದು SSLC ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ ಎಂದರು.
ಇದರೊಂದಿಗೆ ಈ ಕುರಿತು ಟ್ವೀಟ್ ಮೂಲಕ ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ. ಫಲಿತಾಂಶವು ಮೇ 15 ರೊಳಗೆ ಪ್ರಕಟವಾಗುವ ನಿರೀಕ್ಷೆ ಇತ್ತು.ಆದರೆ ಮೌಲ್ಯಮಾ ಪನದಲ್ಲಿನ ಸಣ್ಣಪುಟ್ಟ ದೋಷ ಸರಿಪಡಿಸುವುದು, ಅಂಕ ದಾಖಲೀಕರಣ ಸೇರಿದಂತೆ ಕೊಂಚ ತಡವಾಗಿದ್ದು ಮೇ 19 ರಂದು ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಿಸಲು ಕರ್ನಾಟಕ ಪೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ ಎಂದರು.