ಬೆಂಗಳೂರು –
ಎನ್‌ಇಟಿ ಪ್ರಕಾರವಾಗಿ ಶಾಲೆಪೂರ್ವ ವಿದ್ಯಾರ್ಥಿಗಳಿಗೆ ಹೊಸ ಪಠ್ಯಕ್ರಮ ಇರಲಿದೆ.ತರಬೇತಿ ಪಡೆದ ಅಂಗನವಾಡಿ ಕಾರ್ಯಕರ್ತರು ಈ ಪಠ್ಯಕ್ರಮ ಬೋಧಿಸುತ್ತಾರೆ. ಅಲ್ಲಿಯ ವರೆಗೂ ವಿದ್ಯಾರ್ಥಿಗಳು ಹಿಂದಿನಂತೆ ಚಟುವಟಿಕೆ ಆಧಾರಿ ತವಾಗಿ ಕಲಿಕೆ ಮಾಡಲಿದ್ದಾರೆ.ಅಂಗನವಾಡಿಗಳಲ್ಲಿ ಜಾರಿಗೆ ಬರಲಿರುವ ಎನ್‌ಇಪಿ ಆಧಾರಿತ ಪಠ್ಯಕ್ರಮದಲ್ಲಿ ಒಂದನೇ ತರಗತಿ ಸೇರ್ಪಡೆಗೆ ಅಗತ್ಯವಾಗುವ ನಿಟ್ಟಿನಲ್ಲಿ ಕಲಿಕೆಗಳು ಇರುತ್ತವೆ ಎಂದು ಎನ್‌ಇಪಿ ಕಾರ್ಯಪಡೆ ಮಾಹಿತಿ ನೀಡಿ ದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಚಿಸಿದ ಒಂದು ಉಪಸಮಿತಿ ಮತ್ತು ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆ ಸೇರಿ ಹೊಸ ಪಠ್ಯಕ್ರಮವನ್ನು ರಚಿಸುವ ಕಾರ್ಯ ಮುಂದುವರಿದಿದೆ. ಅದರೆ ಈಗ ಅಂಗನವಾಡಿ ಶಾಲೆಗಳಿಗೆ ಕೊಡಲಾಗುತ್ತಿರುವುದು ತಾತ್ಕಾಲಿಕ ಪಠ್ಯಕ್ರಮವಾಗಿರುತ್ತದೆ ಎನ್‌ಸಿಇಆರ್‌ಟಿಯವರು ಅಕ್ಟೋಬರ್‌ನಲ್ಲಿ ಹೊಸ ಪಠ್ಯಕ್ರ ಮದ ರೂಪುರೇಖೆ ಪ್ರಕಟಿಸಲಿದ್ದಾರೆ.ಅದನ್ನು ಆಧರಿಸಿ ಪಠ್ಯಕ್ರಮವನ್ನು ಪರಿಷ್ಕರಿಸಲಾಗುತ್ತದೆ ಎಂದು ಅಧಿಕಾರಿ ಗಳು ಹೇಳಿದ್ದಾರೆ.
ಇತ್ತ ಎನ್‌ಇಪಿ ಪಠ್ಯಕ್ರಮ ಜಾರಿಗೆ ತರಲಿರುವ ಅಂಗನ ವಾಡಿ ಕಾರ್ಯಕರ್ತರು ಈಗಲೂ ತರಬೇತಿಯಲ್ಲಿ ನಿರತರಾ ಗಿದ್ದಾರೆ.ಒಟ್ಟು 20 ಸಾವಿರ ಅಂಗನವಾಡಿ ಶಿಕ್ಷಕರ ಪೈಕಿ ಎಂಟು ಸಾವಿರ ಮಂದಿಗೆ ತರಬೇತಿ ಬಾಕಿ ಇದೆ.ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷಕ್ಕೆ ಮುನ್ನವೇ ಎನ್‌ಇಪಿ ಮಾದರಿಯಲ್ಲಿ ಪಠ್ಯಕ್ರಮ ಅಳವಡಿಸಲು ವಿಳಂಬವಾಗಲು ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಕಾರಣ ಎನ್ನಲಾಗಿದೆ. ಎನ್‌ಇಪಿ ಯೋಜನೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಕೆಳ ಪ್ರಾಥಮಿಕ ಶಾಲೆಗಳ (ಒಂದು ಮತ್ತು ಎರಡನೇ ತರಗತಿ)ಜೊತೆ ವಿಲೀನ ಮಾಡುವ ಪ್ರಸ್ತಾವ ಇದೆ.ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರು ಕೆಲಸ ಕಳೆದುಕೊಳ್ಳುವ ಭಯದಲ್ಲಿ ಎನ್‌ಇಪಿ ಅಳವಡಿಕೆಗೆ ಮನಸ್ಸು ಮಾಡಿರಲಿಲ್ಲ. ಅವರನ್ನು ಒಪ್ಪಿಸಿ ತರಬೇತಿ ನೀಡುವ ಕೆಲಸ ವಿಳಂಬವಾ ಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.